ಬೆಂಗಳೂರು : ಇತ್ತೀಚಿಗೆ ಬೆಂಗಳೂರುನಲ್ಲಿ ಪಿಎಸ್ಐ ಮರು ಪರೀಕ್ಷೆ ನೇಮಕ ಪ್ರಶ್ನೆ ಪತ್ರಿಕೆ ಹಾಗೂ ಸಿಟಿಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಲಿಂಗಯ್ಯ ಈ ಒಂದು ಪ್ರಕರಣದಲ್ಲಿ ಕೈವಾಡ ಇದೆ ಎಂದು ಆರೋಪಿಸಲಾಗಿದ್ದು, ತಕ್ಷಣ ಸಿಸಿಬಿ ಅಧಿಕಾರಿಗಳು ಎಸ್ಐ ಲಿಂಗಯ್ಯನನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದೀಗ ಸಿಸಿಬಿ ಅಧಿಕಾರಿಗಳ ಮುಂದೆ ಎಸ್ಐ ಲಿಂಗಯ್ಯ ಬಾಯಿಬಿಟ್ಟಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಂಗಯ್ಯನನ್ನು ಸಿಸಿಬಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ನನ್ನದೇನು ತಪ್ಪಿಲ್ಲ ಎಂದು ಲಿಂಗಯ್ಯ ಸಮರ್ಥಿಸಿಕೊಂಡಿದ್ದಾನೆ. ನನ್ನ ವಿರುದ್ಧ ಮಾಡಿರುವ ಪರೀಕ್ಷಾ ಅಕ್ರಮದ ಆರೋಪಗಳು ನಿರಾಧಾರವಾಗಿವೆ ಅಂತ ತನಿಖಾಧಿಕಾರಿ ಮುಂದೆ ಲಿಂಗಯ್ಯ ಹೇಳಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದಬ್ಬರಿಗೆ ನೋಟಿಸ್ ಜಾರಿ ಮಾಡಿದ್ದು ಪವನ್ ಹಾಗೂ ರಜತ್ ಎನ್ನುವವರಿಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದರೆ ಎಂದು ತಿಳಿದುಬಂದಿದೆ.
ಇಬ್ಬರನ್ನು ವಿಚಾರಣೆ ನಡೆಸಿ ಸಿಸಿಬಿ ಪೊಲೀಸರು ಪ್ರಕರಣ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಇಂಟಲಿಜೆನ್ಸ್ ಪಿ ಎಸ್ ಐ ಲಿಂಗಯ್ಯ ಕೈವಾರ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಪೈಸೆ ಲಿಂಗಯ್ಯ ವಿರುದ್ಧ ಸಿಸಿಬಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.