ಪುತ್ತೂರು: ಕೋಮು ದ್ವೇಷ ಹುಟ್ಟಿಸುವ ಪ್ರಚೋದನಕಾರಿ ಭಾಷಣದ ಆರೋಪದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದಂತ ದೂರು ಆಧರಿಸಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಪುತ್ತೂರು ತಾಲ್ಲೂಕಿನ ಉಪ್ಪಳಿಗೆಯಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕೋಮು ದ್ವೇಷ ಹುಟ್ಟಿಸುವಂತೆ ಪ್ರಚೋದನಕಾರಿ ಭಾಷಣೆ ಮಾಡಿದ್ದಾರೆ. ಧಾರ್ಮಿಕ ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವಂತ ಭಾಷಣ ಇದಾಗೆ ಎಂಬುದಾಗಿ ಈಶ್ವರಿ ಪದ್ಮುಂಜ ಎಂಬುವರು ದೂರು ನೀಡಿದ್ದರು.
ಈ ದೂರು ಆಧರಿಸಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಿಎನ್ಎಸ್ 79, 196, 290, 302, ಮತ್ತು 3(5) ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!
ALERT : ನೀವು ಸೇವಿಸುವ `ಮಾತ್ರೆಗಳು’ ಅಸಲಿಯೋ ನಕಲಿಯೋ? ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!








