ಚಂಡೀಗಢ: ಬಾಲಕಿಯೊಬ್ಬಳು ತನ್ನ ಹಾಸ್ಟೆಲ್ ಮೇಟ್ಗಳ ಖಾಸಗಿ ವೀಡಿಯೊಗಳನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾಳೆ. ಇದರಿಂದ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಈ ಸಂಬಂಧ ಮೊಹಾಲಿ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸ್ಟೆಲ್ನಲ್ಲಿ ಸುಮಾರು 60 ಹುಡುಗಿಯರು ಸ್ನಾನ ಮಾಡುತ್ತಿರುವ ವೀಡಿಯೊಗಳು ಸೋರಿಕೆಯಾಗಿದೆ. ಬಾಲಕಿಯೊಬ್ಬಳು ಆ ವಿಡಿಯೋಗಳನ್ನು ಶಿಮ್ಲಾದ ಹುಡುಗನಿಗೆ ಕಳುಹಿಸಿದ್ದಾಳೆ. ಇದೀಗ ಆರೋಪಿ ಬಾಲಕಿಯ ವಿರುದ್ಧ ಐಪಿಸಿ ಸೆಕ್ಷನ್ 354 ಸಿ ಮತ್ತು ಐಟಿ ಕಾಯ್ದೆಯಡಿ ಘರುವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಲವು ವರದಿಗಳ ಪ್ರಕಾರ, ಆನ್ಲೈನ್ನಲ್ಲಿ ವೀಡಿಯೊಗಳು ಸೋರಿಕೆಯಾದ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಆರೋಪಿ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.
Protest breaks out in Chandigarh University after someone secretly recorded videos of girls from hostel bathroom and leaked them online. University administration is trying to muzzle the protest, according to a student : @PunYaab
— Yogita Bhayana योगिता भयाना (@yogitabhayana) September 17, 2022
ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಶಾಂತವಾಗಿರುವಂತೆ ಕೇಳಿಕೊಂಡಿದ್ದಾರೆ.
“ಯಾರನ್ನೂ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಗೆ ಸಂಬಂಧಿಸಿದೆ. ಮಾಧ್ಯಮಗಳು ಸೇರಿದಂತೆ ನಾವೆಲ್ಲರೂ ಬಹಳ ಜಾಗರೂಕರಾಗಿರಬೇಕು. ಇದು ನಮಗೀಗ ಒಂದು ಪರೀಕ್ಷೆಯಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
I humbly request all the students of Chandigarh University to remain calm, no one guilty will be spared.
It’s a very sensitive matter & relates to dignity of our sisters & daughters.
We all including media should be very very cautious,it is also test of ours now as a society.
— Harjot Singh Bains (@harjotbains) September 18, 2022
ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರದಿ ಮಾಡಲಾಗಿದ್ದು, ಮೊಹಾಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲಿದ್ದಾರೆ.
Shocking News : `ನನ್ನ ನೋಡಿ ಬೊಗಳುತ್ತೆ’ ಎಂಬ ಕಾರಣಕ್ಕೆ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!
BIGG NEWS: ನಾಳೆಯಿಂದ ಮತ್ತೆ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ