ಬೆಂಗಳೂರು: ದಶಕಗಳ ಹಿಂದೆಯೇ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕರೆದಿದ್ದರು. ಇದೀಗ ಕೆರೆಗೆ ಇದ್ದ ಊರಿನ ಹೆಸರಿನ ಬದಲಾವಣೆ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.
BREAKING NEWS: ವೋಟರ್ ಐಡಿ ಅಕ್ರಮ ಪ್ರಕರಣ; ತನಿಖಾಧಿಕಾರಿ ನೇಮಕ ಮಾಡಿದ ಆಯೋಗ
16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ. ಈಗ ವಿಚಾರ ಏನಂದ್ರೆ, ಐತಿಹಾಸಿಕ ಸಿಂಗಾಪುರ ಕೆರೆಯ ಹೆಸರನ್ನ ಬದಲಾವಣೆ ಮಾಡಿದ್ದರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಗಾಪುರ ಕೆರೆಗೆ ಭಗವಾನ್ ಬುದ್ದ, ಅಂಬೇಡ್ಕರ್ ಕೆರೆ ಎಂದು ಮರುನಾಮಕರಣ ಮಾಡಿರೋದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ನವೆಂಬರ್ 6ರಂದು ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದಾರೆ.
BREAKING NEWS: ವೋಟರ್ ಐಡಿ ಅಕ್ರಮ ಪ್ರಕರಣ; ತನಿಖಾಧಿಕಾರಿ ನೇಮಕ ಮಾಡಿದ ಆಯೋಗ
ಸಾರ್ವಜನಿಕರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ಕೆರೆಯನ್ನ ಬದಲಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ನಗರದ ಇತರೆ ಕೆರೆಗಳಿಗೆ ಊರಿನ ಹೆಸರನ್ನೇ ಇಡಲಾಗಿದೆ. ಸಿಂಗಾಪುರಕ್ಕೆ ಇರುವ ಐತಿಹಾಸಿಕ ಕೆರೆಯ ಪ್ರತಿಮೆಯನ್ನ ಹಾಳು ಮಾಡುವ ಕೆಲಸ ಆಗ್ತಿದೆ. ಕೂಡಲೇ ಇದನ್ನ ಹಿಂಪಡೆದು ಐತಿಹಾಸಿಕವಾಗಿದ್ದ ಸಿಂಗಾಪುರ ಕೆರೆ ಅಂತಲೇ ಮುಂದುವರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.