ಕೊಲಂಬೊ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ ‘ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಕೊಲಂಬೊದ ಆವರಣದಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.
“ನಾವು ಪ್ರತಿಭಟನಾಕಾರರು, ಅಡುಗೆ ಮಾಡಲು ಪ್ರಾರಂಭಿಸಿದ್ದೇವೆ. ನಾವು ಪ್ರಧಾನಿ ಮನೆಯೊಳಗಿದ್ದೇವೆ. ನಾವು ಪಿಎಂ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಗಾಗಿ ಹೋರಾಟ ಮಾಡಿದ್ದೇವೆ. ಅವರು ರಾಜೀನಾಮೆ ನೀಡಿದಾಗ ಮಾತ್ರ ನಾವು ಆವರಣವನ್ನು ತೊರೆಯುತ್ತೇವೆ” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಪ್ರಧಾನಿ ವಿಕ್ರಮಸಿಂಘೆ ಅವರ ನಿವಾಸದ ಆವರಣದಲ್ಲಿ ಕೇರಂ ಆಡುವುದು, ಆರಾಮವಾಗಿ ಮಲಗುವುದು ಮತ್ತು ಅಡ್ಡಾಡುವುದು. ಅಷ್ಟೇ ಅಲ್ಲದೇ, ಮನೆಯ ಆವರಣದಲ್ಲಿ ಭರ್ಜರಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.
#WATCH | Sri Lanka: Protestors start preparing & cooking food inside the premises of the residence of the Sri Lankan PM, in Colombo, as they continue to remain there amid ongoing protests against the country’s financial turmoil#SriLankaEconomicCrisis pic.twitter.com/6kHuo2bgcY
— ANI (@ANI) July 10, 2022
#WATCH | Sri Lanka: Inside visuals from ‘Temple Tree’ official residence of Sri Lankan PM, where protestors are playing carrom, lying leisurely & loitering in the premises
Sri Lankan PM Ranil Wickremesinghe’s residence was stormed by a sea of protestors, yesterday pic.twitter.com/c0HdfO4t6K
— ANI (@ANI) July 10, 2022
ಶ್ರೀಲಂಕಾದಲ್ಲಿ ಏನಾಗುತ್ತಿದೆ?
ಕೊಲಂಬೊದ ರಾಜಧಾನಿಯಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿದ ನಂತ್ರ ರಾಜಪಕ್ಸೆ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ. ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜೀನಾಮೆಗೆ ಒತ್ತಾಯಿಸಿದರು. ಪ್ರಧಾನಿ ರನಿಲ್ ವಿಕ್ರಮಸಿಂಗ್ ಅವರ ಖಾಸಗಿ ನಿವಾಸಕ್ಕೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಜುಲೈ 13 ರಂದು ಗೋತಬಯ ರಾಜಪಕ್ಸೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಈಗಾಗಲೇ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ.
Video: ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಆ್ಯಂಬುಲೆನ್ಸ್ಗಾಗಿ ರಸ್ತೆ ಬದಿ ಕಾದು ಕುಳಿತ ಬಾಲಕ…
ದೇಣಿಗೆ ಹಣ ದುರುಪಯೋಗ ಆರೋಪ: ‘ನರ್ಮದಾ ಬಚಾವೋ’ ಆಂದೋಲನದ ಸಂಸ್ಥಾಪಕಿ ʻಮೇಧಾ ಪಾಟ್ಕರ್ʼ ವಿರುದ್ಧ ಕೇಸ್ ದಾಖಲು