ಬೆಂಗಳೂರು : ರಾಜ್ಯ ಕಬ್ಬು ಬೆಳೆಗಾರರ ಸಂಘದ 37ನೆ ದಿನದ ಆಹೋರಾತ್ರಿ ಧರಣಿ ನಿರತ ರೈತರು, ಮೂರು ದಿನದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ 14 ದಿನಗಳ ಹಿಂದೆ ಧರಣಿ ನಿರತ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತುಕತೆ ನಡೆಸಿ ಕಬ್ಬಿನ ದರ ಎರಿಕೆ ಭರವಸೆ ನೀಡಿ,ಈ ತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ, ಬರಿ ಮಾತಿನ ಭರವಸೆ ಬೇಡ ನುಡಿದಂತೆ ನಡೆಯಬೇಕು, ನ್ಯಾಯ ಸಮ್ಮತ ಕಬ್ಬುದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಮೂರು ದಿನದಿಂದ ಐದು ರೈತರು ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
ಹಳಿಯಾಳದ ರೈತರು ಸರದಿ ಉಪವಾಸ ಸತ್ಯಾಗ್ರಹ ಆರಂಭಸಿದ್ದು, ಬೆಳಗಿನಿಂದಲೇ ಆಹಾರ ತ್ಯಜಿಸಿ ಸಂಜೆ 6 ಗಂಟೆ ತನಕ ಉಪವಾಸ ಮಾಡಿದ್ದಾರೆ, ಉಳಿದ ರೈತರು ಹಾಗೂ,ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯ ಸರ್ಕಾರ ರೈತರ ಹೋರಾಟವನ್ನ ಲಘುವಾಗಿ ಕಾಣಬಾರದು ವಚನಭ್ರಷ್ಟರಾಗಬಾರದು, ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಾಳೆಯಿಂದ ನಿರಂತರ ಉಪವಾಸ ಕೈಗೊಳ್ಳಲಾಗುವುದು, ಮುಖ್ಯಮಂತ್ರಿಗಳು ಕಬ್ಬು ದರ ಏರಿಕೆ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎನ್ನುವಂಥಾದರೆ ಬಹಿರಂಗವಾಗಿ ತಿಳಿಸಿ, ರಾತ್ರಿ ವೇಳೆಯಲ್ಲಿ ಮುಂಜಾಗ್ರತಾ ಕ್ರಮವೆಂದು ರೈತರ ಮುಖಂಡರನ್ನು ಬಂಧಿಸುವುದು, ಚಳುವಳಿಯನ್ನು ದಿಕ್ಕು ತಪ್ಪಿಸುವುದು ಪೊಲೀಸ್ ಬಲದ ಮೂಲಕ ಹತ್ತಿಕುವುದು ಸರ್ಕಾರಕ್ಕೆ ಶೋಭೆತರುವುದಿಲ್ಲ ,ಕಬ್ಬು ಬೆಳೆಗಾರ ರೈತರಿಗೆ ಯಾವುದೇ ಅಡಚಣೆ ಇಲ್ಲದೆ ಜಾತಾ ನಡೆಸಲು ಅವಕಾಶ ನೀಡಲಿ, ನಮ್ಮ ಶಕ್ತಿ ತೋರುತ್ತೇವೆ, ಸದಾ ರೈತಪರ ಎನ್ನುವ ಈ ಸರ್ಕಾರ ರೈತರ ಕಣ್ಣಿಗೆ ಮಣ್ಣೆರೆಚಬಾರದು ಎಂದು ಎಚ್ಚರಿಸುತ್ತಿದ್ದೇನೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
BIG NEWS : ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಂಧ್ರ ಸಿಎಂ : ರಾಜ್ಯದ ಸಮಸ್ಯೆಗಳ ಕುರಿತು ಚರ್ಚೆ
BIG NEWS : ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಂಧ್ರ ಸಿಎಂ : ರಾಜ್ಯದ ಸಮಸ್ಯೆಗಳ ಕುರಿತು ಚರ್ಚೆ