ಬೆಂಗಳೂರು : ಕೇಂದ್ರ ಸರ್ಕಾರದ ಗೃಹ ಇಲಾಖೆಯ ‘ರಾಜ ಭಾಷಾ ಸಮಿತಿ’ ಬೆಂಗಳೂರಿನ ತಾಜ್‌ವೆಸ್ಟ್ಎಂಡ್ ಹೋಟೆಲಿನಲ್ಲಿ ಗುರುವಾರ ಆಯೋಜಿಸಿದ್ದ ‘ಹಿಂದಿ ಪ್ರಚಾರ ಸಭೆ’ಗೆ ಕರ್ನಾಟಕ ರಕ್ಷಣಾ ವೇದಿಕೆ ಏಕಿಏಕಿ ದಾಳಿ ನಡೆಸಿದೆ.
ಹೌದು ಬೆಂಗಳೂರಿನಲ್ಲಿ ಉತ್ತರ ಭಾರತದ ಸಂಸದರ ಕಾರ್ಯಕ್ರಮದಲ್ಲಿ ಕರವೇ ಕಾರ್ಯಕರ್ತರು ಏಕಾಏಕಿ ನುಗ್ಗಿ ದಾಂಧಲೇ ನಡೆಸಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಕಾರ್ಯಕ್ರಮ ಅಂತ ಕರವೇ ಆಕ್ಷೇಪ ವ್ಯಕ್ತಪಡಿಸಿದ್ದು, ತಾಜ್ ವೆಸ್ಟೆಂಡ್ ಹೋಟೆಲಿಗೆ ನುಗ್ಗಿ ಕಾರ್ಯಕರ್ತರು ದಾಂದಲೆ ಮಾಡಿದ್ದಾರೆ. ಕರವೇ ನಾರಾಯಣಗೌಡ ನೇತೃತ್ವದಲ್ಲಿ ಮುತ್ತಿಗೆಗೆ ಪ್ರಯತ್ನಿಸಿದ್ದಾರೆ.
ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಯಕ್ರಮದ ನಡುವೆ ಕರವೇ ಕಾರ್ಯಕರ್ತರು ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.