ಬೆಂಗಳೂರು : ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾಕ್ಟರ್ ಎಂ. ಎ ಸಲೀಂ ಆದೇಶ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ನಡೆದ ಪ್ರಕರಣವನ್ನು ಉಲ್ಲೇಖಿಸಿ ಈ ಒಂದು ಆದೇಶ ಹೊರಡಿಸಿದ್ದು, ನೊಂದ ಮಹಿಳೆಯರು ಹಾಗೂ ಅಪ್ರಾಪ್ತರ ವಿಳಾಸ ಗೌಪ್ಯತೆಗೆ ಡಾಕ್ಟರ್ ಎಂ.ಎ ಸಲೀಂ ಸೂಚನೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕೂಡ ಗೌಪ್ಯತೆ ಕಾಪಾಡುವಂತೆ ಸೂಚಿಸಿದ್ದಾರೆ. ಮೂಲ ದೂರು ಅರ್ಜಿಯನ್ನು ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ವಿಳಾಸ ಹಾಗೂ ಗುರುತು ಇರಬೇಕು.
ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿಯ ಅಥವಾ ತನಿಕಾಧಿಕಾರಿ ಗೌಪ್ಯತೆ ಕಾಪಾಡಲು ಮೂಲ ಹೆಸರು ಬದಲಾಯಿಸಬೇಕು. ಬದಲಾವಣೆಯ ಬಳಿಕ ನ್ಯಾಯಾಲಯಕ್ಕೆ ದೂರು ನೀಡಬೇಕು ಮತ್ತು ಬದಲಿ ಹೆಸರು ಇರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಐಜಿ, ಡಿಸಿಪಿ ಸಲೀಂ ಆದೇಶ ಹೊರಡಿಸಿದ್ದಾರೆ.ಎಫ್ ಐ ಆರ್ ನಲ್ಲಿ ಹೆಸರು ಬದಲಾಯಿಸುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಟಿಪ್ಪಣಿಯ ವೇಳೆ ಹೆಸರು ಬದಲಾಗಿದೆ ಎಂದು ನಮೂದಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾಕ್ಟರ್ ಎಂ ಎ ಸಲೀಂ ಅವರು ಆದೇಶ ಹೊರಡಿಸಿದ್ದಾರೆ








