ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಅರ್ಜಿಯನ್ನು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ದೂರುದಾರರು ಪ್ರಾಸಿಕ್ಯೂಷನ್ ಗೆ ಅನುಮತಿ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಹಾಗಾದ್ರೇ ರಾಜ್ಯಪಾಲರ ಸಮಯ ವ್ಯರ್ಥ ಮಾಡಿದಂತ ದೂರುದಾರ ಅಬ್ರಾಹಂ ವಿರುದ್ಧ ದಂಡ ವಿಧಿಸುವಂತೆ ಹೈಕೋರ್ಟ್ ನಲ್ಲಿ ಸಿಎಂ ಪರ ವಕೀಲರು ಮನವಿ ಮಾಡಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವಂತ ಅರ್ಜಿಯ ವಿಚಾರಣೆ ಹೈಕೋರ್ಟ್ ನ ನ್ಯಾಯಪೀಠದಲ್ಲಿ ನಡೆಯುತ್ತಿದೆ. ಹೈಕೋರ್ಟ್ ನ್ಯಾಯಪೀಠಕ್ಕೆ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಾಸಿಕ್ಯೂಷನ್ ಗೆ ನೀಡಿರುವಂತ ಅನುಮತಿಯನ್ನು ಹಿಂಪಡೆಯಬೇಕು. ರಾಜ್ಯಪಾಲರು 17ಎ ರಡಿ ಅನುಮತಿ ನೀಡಿದ್ದಾರೆ. ದೂರುದಾರ ಈಗ ಪೂರ್ವಾನುಮತಿ ಬೇಕಿಲ್ಲ ಎನ್ನುತ್ತಿದ್ದಾರೆ ಎಂದರು.
ದೂರುದಾರ ಟಿಜೆ ಅಬ್ರಾಹಂ ಕೋರ್ಟ್ ಮುಂದೆ ಒಂದು ಹೇಳುತ್ತಿದ್ದಾರೆ. ರಾಜ್ಯಪಾಲರ ಮುಂದೆ ಮಗದೊಂದು ಹೇಳಿಕೆ ನೀಡುತ್ತಿದ್ದಾರೆ. ಒಮ್ಮ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಈಗ ಬೇಕಿಲ್ಲ ಎನ್ನುತ್ತಿದ್ದಾರೆ. ಅವರು ರಾಜ್ಯಪಾಲರ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಅವರ ವಿರುದ್ಧ ದಂಡ ವಿಧಿಸುವಂತ ಮನವಿ ಮಾಡಿದರು.
ಆಸ್ತಿ ಖರೀದಿ, ಮಾರಟಗಾರರಿಗೆ ಗುಡ್ ನ್ಯೂಸ್ : ಸೆ.2ರಿಂದ ರಾಜ್ಯಾದ್ಯಂತ ‘ಎನಿವೇರ್ ರಿಜಿಸ್ಟ್ರೇಷನ್’ ಯೋಜನೆ ಜಾರಿ!
`TRAI’ ನಿಂದ ಹೊಸ ನಿಯಮ ಜಾರಿ : ಈ ತಪ್ಪು ಮಾಡಿದ್ರೆ ಬಂದ್ ಆಗಲಿದೆ ನಿಮ್ಮ `SIM ಕಾರ್ಡ್’ | TRAI New Rules