ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದು ಒಂದು ವರ್ಷವಾದರೂ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ನಮ್ಮವರೇ ನೀಡಿದ ಮಾಹಿತಿಯು ಬ್ರಿಟಿಷರಿಗೆ ಅನುಕೂಲವಾಗಿತ್ತು. ಚನ್ನಮ್ಮನ ಹೋರಾಟದ ಬಗ್ಗೆ ನಾಡಿಗೆ ತಿಳಿಸುವುದಕ್ಕಾಗಿ 2017ರಲ್ಲಿ ನಮ್ಮ ಸರ್ಕಾರವೇ ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿತು ಎಂಬುದು ನಮಗೆ ಹೆಮ್ಮೆಯ ವಿಷಯ. ಚನ್ನಮ್ಮನ ಸಾಹಸಗಾಥೆ ತಿಳಿಸಲು ಜಯಂತಿ ಆರಂಭಿಸಲಾಯಿತೇ ಹೊರತು ರಾಜಕೀಯ ಕಾರಣಕ್ಕಲ್ಲ. ಚನ್ನಮ್ಮನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದು ಸಿಎಂ ಹೇಳಿದರು.
ಇದೆ ವೇಳೆ ಉತ್ತರಧಿಕಾರಿ ಬಗ್ಗೆಯೂ ಮಾತನಾಡಿದ ಅವ್ರು, ಲೀಡರ್ ಯಾರು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಹಿಂದ ಸಂಘಟನೆ ಮುನ್ನಡೆಸುವ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೇ ಎಂದು ಸಂಘಟನೆ ಮುನ್ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಸೈದಾಂತಿಕವಾಗಿ ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ ಆಮೇಲೆ ಇದೀಗ ಸತೀಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ ಅಂತ ಯತೀಂದ್ರ ಹೇಳಿದರೆ ಹೊರತು ಅವರೆ ಲೀಡರ್ ಆಗಬೇಕು ಅಂತ ಹೇಳಿಲ್ಲ. ಯಾರನ್ನ ಲೀಡರ್ ಮಾಡಬೇಕು ಅಂತ ಹೇಳುವುದು ಹೈಕಮಾಂಡ್ ನಾವು ಮಾಡಲ್ಲ ಯತೀಂದ್ರನು ಮಾಡಲ್ಲ ಯಾರು ಮಾಡಲ್ಲ ಎಂದರು.








