Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವೀರಶೈವ ಜಂಗಮರು `SC’ ಪಟ್ಟಿಗೆ ಸೇರಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

04/04/2026 8:03 AM

BIG NEWS : ರಾಜ್ಯದಲ್ಲಿ ಏ.16ರಿಂದ `ಜನಗಣತಿ’ಗೆ 1 ಲಕ್ಷ ಶಾಲಾ ಶಿಕ್ಷಕರ ನಿಯೋಜನೆ.!

04/04/2026 7:49 AM

ಚಿನ್ನದ ದರದಲ್ಲಿ ಮಹಾ ತಲ್ಲಣ! ಒಂದೇ ದಿನ 40,000 ರೂ. ಕುಸಿದು ಮತ್ತೆ ಪುಟಿದೆದ್ದ ಬಂಗಾರ; ಇಂದು ಬೆಲೆ ಏರುತ್ತಾ ಅಥವಾ ಇಳಿಯುತ್ತಾ?

04/04/2026 7:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದುವೆ ಭರವಸೆ ನೀಡಿ, ಸೆಕ್ಸ್ ಕೇಸ್ ನಲ್ಲಿ ಕಡ್ಡಾಯವಿಲ್ಲದಿದ್ದರು, ಆರೋಪಿಗಳ ಬಂಧನವೇಕೆ? : ಹೈಕೋರ್ಟ್ ತರಾಟೆ!
KARNATAKA

ಮದುವೆ ಭರವಸೆ ನೀಡಿ, ಸೆಕ್ಸ್ ಕೇಸ್ ನಲ್ಲಿ ಕಡ್ಡಾಯವಿಲ್ಲದಿದ್ದರು, ಆರೋಪಿಗಳ ಬಂಧನವೇಕೆ? : ಹೈಕೋರ್ಟ್ ತರಾಟೆ!

By kannadanewsnow0527/02/2026 10:27 AM

ಬೆಂಗಳೂರು : ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಲ್ಲದಿದ್ದರೂ, ಪೊಲೀಸರು ಬಂಧಿಸುತ್ತಿರುವುದಕ್ಕೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಬೆಳವಣಿಗೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್‌.ಜಿ. ಗಂಗ (29) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸುವಲ್ಲಿ ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆರೋಪಿಯನ್ನು ಏಕೆ ಬಂಧಿಸಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಅರ್ಜಿದಾರ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆಗ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿ*ಕ ಕ್ರಿಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂಥ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಏಕೆ ಬಂಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.

ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಇಂಥ ಪ್ರಕರಣ ಎದುರಿಸುತ್ತಿರುವ ಎಲ್ಲ ಆರೋಪಿಗಳು ಜೈಲಿನೊಳಗಿದ್ದಾರೆ. ಬಂಧನ ಮಾಡಬಾರದು ಎಂದು ಕೋರ್ಟ್‌ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ಎಂದು ಖಾರವಾಗಿ ನುಡಿದರು.

ಪ್ರಕರಣದಲ್ಲಿ ಅರ್ಜಿದಾರ ಆರೋಪಿ, ದೂರುದಾರೆಯೊಂದಿಗೆ ಎರಡೂವರೆ ವರ್ಷ ಸಂಬಂಧ ಹೊಂದಿದ್ದರು. ಕಾನೂನು ದುರ್ಬಳಕೆಗೆ ಈ ಪ್ರಕರಣ ಮತ್ತೊಂದು ಸ್ಪಷ್ಟ ಉದಾಹರಣೆ. ಈ ಅಪರಾಧ ಸಂಬಂಧ ಜಾರಿಗೆ ಬಂದಿರುವ ಹೊಸ ನಿಯಮ ಬಿಎನ್‌ಎಸ್‌ ಸೆಕ್ಷನ್‌ 69 ಅನ್ನು ಸಹ ದುರುಪಯೋಗ ಮಾಡಲಾಗುತ್ತಿದೆ. ಇಂತಹ ಬೆಳವಣಿಗೆ ತಡೆಯಲು ಏನಾದರೂ ಮಾಡಬೇಕು ಎಂದು ಸರ್ಕಾರಿ ಅಭಿಯೋಜಕರಿಗೆ ನ್ಯಾಯಪೀಠ ಸೂಚಿಸಿತು.

Share. Facebook Twitter LinkedIn WhatsApp Email

Related Posts

BIG NEWS : ವೀರಶೈವ ಜಂಗಮರು `SC’ ಪಟ್ಟಿಗೆ ಸೇರಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

04/04/2026 8:03 AM1 Min Read

BIG NEWS : ರಾಜ್ಯದಲ್ಲಿ ಏ.16ರಿಂದ `ಜನಗಣತಿ’ಗೆ 1 ಲಕ್ಷ ಶಾಲಾ ಶಿಕ್ಷಕರ ನಿಯೋಜನೆ.!

04/04/2026 7:49 AM1 Min Read

ಸಮಾಜದ ಸ್ವಾಸ್ಥ್ಯ ಕೆಡಿಸುವ ಯೂಟ್ಯೂಬ್ ಚಾನಲ್ ಗಳ ಮೇಲೆ ಸರ್ಕಾರದ ಹದ್ದಿನ ಕಣ್ಣು: ಸಿಎಂ ಕಠಿಣ ಕ್ರಮದ ಎಚ್ಚರಿಕೆ

04/04/2026 7:27 AM1 Min Read
Recent News

BIG NEWS : ವೀರಶೈವ ಜಂಗಮರು `SC’ ಪಟ್ಟಿಗೆ ಸೇರಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

04/04/2026 8:03 AM

BIG NEWS : ರಾಜ್ಯದಲ್ಲಿ ಏ.16ರಿಂದ `ಜನಗಣತಿ’ಗೆ 1 ಲಕ್ಷ ಶಾಲಾ ಶಿಕ್ಷಕರ ನಿಯೋಜನೆ.!

04/04/2026 7:49 AM

ಚಿನ್ನದ ದರದಲ್ಲಿ ಮಹಾ ತಲ್ಲಣ! ಒಂದೇ ದಿನ 40,000 ರೂ. ಕುಸಿದು ಮತ್ತೆ ಪುಟಿದೆದ್ದ ಬಂಗಾರ; ಇಂದು ಬೆಲೆ ಏರುತ್ತಾ ಅಥವಾ ಇಳಿಯುತ್ತಾ?

04/04/2026 7:48 AM

ಇರಾನ್‌ನಿಂದ ಅಮೆರಿಕದ ಯುದ್ಧ ವಿಮಾನ ಪತನ: ಯುದ್ಧದ ಭೀತಿ ನಡುವೆಯೂ ‘ಸಂಧಾನ’ಕ್ಕೆ ಸಿದ್ಧ ಎಂದ ಟ್ರಂಪ್! USನ ಅಚ್ಚರಿಯ ನಡೆ!

04/04/2026 7:31 AM
State News
KARNATAKA

BIG NEWS : ವೀರಶೈವ ಜಂಗಮರು `SC’ ಪಟ್ಟಿಗೆ ಸೇರಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

By kannadanewsnow5704/04/2026 8:03 AM KARNATAKA 1 Min Read

ಬೀದರ್: ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿ (SC) ಪಟ್ಟಿಗೆ ಸೇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ…

BIG NEWS : ರಾಜ್ಯದಲ್ಲಿ ಏ.16ರಿಂದ `ಜನಗಣತಿ’ಗೆ 1 ಲಕ್ಷ ಶಾಲಾ ಶಿಕ್ಷಕರ ನಿಯೋಜನೆ.!

04/04/2026 7:49 AM

ಸಮಾಜದ ಸ್ವಾಸ್ಥ್ಯ ಕೆಡಿಸುವ ಯೂಟ್ಯೂಬ್ ಚಾನಲ್ ಗಳ ಮೇಲೆ ಸರ್ಕಾರದ ಹದ್ದಿನ ಕಣ್ಣು: ಸಿಎಂ ಕಠಿಣ ಕ್ರಮದ ಎಚ್ಚರಿಕೆ

04/04/2026 7:27 AM

ಪೋಷಕರೇ ಗಮನಿಸಿ : ನಿಮ್ಮ ಮಗುವಿಗೆ 1ನೇ ತರಗತಿಗೆ ದಾಖಲಿಸಲು ಜೂನ್ 30 ಕೊನೆಯ ದಿನ.!

04/04/2026 7:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.