ಶಿಮೊಗ್ಗ: ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆ ಸದಾ ಜನ ಜಂಗಲಿಯಿಂದ ತುಂಬಿ ವ್ಯಾಪಾರ ವಾಹಿವಾಟು ನಡೆಸುತ್ತಿದ್ದ ಗಾಂಧಿ ಬಜಾರ್ನಲ್ಲಿರೋ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್. ಮುಂದಿನ ಆದೇಶದ ವರೆಗೆ ಅಂಗಡಿ ತೆರೆಯದಂತೆ ಸೂಚನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಗಾಂಧಿ ಬಜಾರ್ನಲ್ಲಿರೋ ಅಂಗಡಿ ಮುಂಗಟ್ಟು ವ್ಯಾಪಾರಿಗಳು ಮಾಧ್ಯಮಗೊಂದಿಗೆ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻ ಯಾರೋ ಮಾಡಿದ ತಪ್ಪಿಗೆ ನಮಗ್ಯಾಗೆ ಶಿಕ್ಷೆʼ..? ʻನಮ್ಮ ಹೊಟ್ಟೆ ಹೊಡೆಯುವ ಕೆಲಸ ವಾಗುತ್ತಿದೆʼ ಎಂದು ಜಿಲ್ಲೆಯ ಅಂಗಡಿ ಮಾಲೀಕರು ತಮ್ಮ ಆಳಲನ್ನು ಹೇಳಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುತ್ತದೆ.
ನಮಗೆ ದುಡಿದು ತಿನ್ನೋದಕ್ಕು ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಬೀಟ್ ಪೊಲೀಸರು ಇಲ್ಲ. ಸಮಸ್ಯೆ ಆದಾಗ ಮಾತ್ರ ಪೊಲೀಸರು ಬರುತ್ತಾರೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಾರೆ.