ಶಿವಮೊಗ್ಗ: ನಗರದಲ್ಲಿ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಜಾರಿ ಮಾಡಲಾಗಿದ್ದ ನಿಷೇಧಾಜ್ಞೆಯನ್ನು ಶನಿವಾರ ಬೆಳಗ್ಗೆವರೆಗೆ ಮುಂದುವರಿಸಲಾಗಿದೆ.
ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ತಾಲೂಕಿನಾದ್ಯಂತ ನಾಳೆ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ಸೇಲ್ವಮಣಿ ಆದೇಶ ಹೊರಡಿಸಿದ್ದಾರೆ. ಆದರೆ ಅಂಗಡಿ, ಹೂವಿನ ಮಾರುಕಟ್ಟೆಗಳಿಗೆ ಅವಕಾಶ ನೀಡಲಾಗಿದೆ