ಗುರುಗ್ರಾಮ : ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಾಲ್ಕು ಔಷಧಗಳ ಬಗ್ಗೆ ಎಚ್ಚರಿಕೆ ನೀಡಿದ ಒಂದು ವಾರದ ನಂತರ, ಹರಿಯಾಣ ಸರ್ಕಾರವು ಬುಧವಾರ ಸೋನೆಪತ್ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ಗೆ ಕೆಮ್ಮಿನ ಸಿರಪ್ಗಳ ಉತ್ಪಾದನೆಯನ್ನು ಸ್ಥಗಿತ ಮಾಡುವಂತೆ ನಿರ್ದೇಶಿಸಿದೆ.
ಪ್ರೊಮೆಥಜ಼ಿನೇ ಓರಲ್ ಸೊಲ್ಯೂಷನ್, ಕೋಫೆಕ್ಷ್ಮಲಿನ್ ಬೇಬಿ ಕಾಫ್ ಸಿರಪ್, ಮಾಕೋಫ್ ಬೇಬಿ ಕಾಫ್ ಸಿರಪ್ ಮತ್ತು ಮ್ಯಾಗ್ರಿಪ್ ನ್ ಕೋಲ್ಡ್ ಸಿರಪ್ ಎಂಬ ನಾಲ್ಕು ಕಳಪೆ ಗುಣಮಟ್ಟದ ಉತ್ಪನ್ನಗಳು, ಇವೆಲ್ಲವೂ ಮೇಡನ್ ವೈದ್ಯಕೀಯ ಸಂಸ್ಥೆಯಿಂದ ತಯಾರಿಸಲ್ಪಟ್ಟಿವೆ ಎಂದು ಡಬ್ಲ್ಯೂಎಚ್ಒ ವೈದ್ಯಕೀಯ ಉತ್ಪನ್ನ ಎಚ್ಚರಿಕೆ ತಿಳಿಸಿದೆ. ಎಥಿಲೀನ್ ಗ್ಲೈಕಾಲ್ ಇರುವಿಕೆಯಿಂದಾಗಿ ಭಾರತೀಯ ಫಾರ್ಮಾ ಕಂಪನಿಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಗಳು 66 ಮಕ್ಕಳ ಸಾವಿಗೆ ಕಾರಣವಾಗಿವೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಆತಂಕಕಾರಿಯಾಗಿದೆ. ಡಬ್ಲ್ಯುಎಚ್ಒ ಎಚ್ಚರಿಕೆಯ ನಂತರ ಭಾರತದ ಔಷಧ ನಿಯಂತ್ರಕರಿಂದ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್, ಸೋನಿಪತ್ನ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಡಬ್ಲ್ಯುಎಚ್ಒ ಉಲ್ಲೇಖಿಸಿದ 3 ಔಷಧಗಳ ಮಾದರಿಗಳನ್ನು ಕೋಲ್ಕತ್ತಾದ ಸೆಂಟ್ರಲ್ ಡ್ರಗ್ ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ಹೇಳಿದರು. ವರದಿಗಳು ಇನ್ನೂ ಬಂದಿಲ್ಲ, ಅದರ ನಂತರ ಕ್ರಮ ಕೈಗೊಳ್ಳಲಾಗುವುದು.