ನವದೆಹಲಿ: ದೇಶದ ಕಾರ್ಖಾನೆಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಉತ್ಪಾದನೆ 4% ಇಳಿಕೆಯಾಗಿದೆ ಎಂದು ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ವರದಿ ತಿಳಿಸಿದೆ.
BIGG NEWS : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ರಾತ್ರೋರಾತ್ರಿ ಬೆಳಗಾವಿಗೆ ಭೇಟಿ ನೀಡಿದ `NCP’ ಶಾಸಕ ರೋಹಿತ್ ಪವಾರ್
ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಐಐಪಿ, ಕಳೆದ ಅಕ್ಟೋಬರ್ ನಲ್ಲಿ 129.6 ಅಂಶಗಳಿಗೆ ಇಳಿದಿತ್ತು. ಸೆಪ್ಟಂಬರ್ ನಲ್ಲಿ ಇದು 135.5 ರಷ್ಟಿತ್ತು. ಈ ವರ್ಷ ಏಪ್ರಿಲ್- ಅಕ್ಟೋಬರ್ ನಲ್ಲಿ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ 5.3% ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 20.5% ಇತ್ತು.
2022 ರ ಅಕ್ಟೋಬರ್ ನಲ್ಲಿ ಉತ್ಪಾದನೆ ವಲಯ 5.5% ಇಳಿಕೆ ದಾಖಲಿಸಿತ್ತು. ಗಣಿಗಾರಿಕೆ 2.5 % ಮತ್ತು ವಿದ್ಯುತ್ ಉತ್ಪಾದನೆ 1.2% ವಿಸ್ತರಿಸಿತ್ತು.