ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ರು ಇದುವರೆಗೂ ಏಳು ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಗೆ ಒಳಪಟ್ಟ ಎಲ್ಲರೂ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ.
ಒಟ್ಟು 26 ಜನರ ಪಟ್ಟಿ ಮಾಡಿರುವ ವಿಧಾನಸೌಧದ ಠಾಣೆಯ ಪೊಲೀಸರು ಈ ವರೆಗೆ 7 ಜನರ ವಿಚಾರಣೆಯಾಗಿದ್ದು, 19 ಮಂದಿ ವಿಚಾರಣೆ ಬಾಕಿ ಇದೆ ಈ ವೇಳೆ ಜನರ ಪೈಕಿ 3 ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಮೂವರ ವಾಯ್ಸ್ ಸ್ಯಾಂಪಲ್ ಗಳನ್ನು ಮಾತ್ರ ಎಫ್ಎಸ್ಎಲ್ ಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ವಿಶ್ವದ ಮೊದಲ ‘ವೈದಿಕ ಗಡಿಯಾರ’ ಪ್ರಧಾನಿ ಮೋದಿಯಿಂದ ಉದ್ಘಾಟನೆ | ಅದರ ವೈಶಿಷ್ಟ್ಯಗಳನ್ನು ತಿಳಿಯಿರಿ
ಅಲ್ಲದೆ ಅದರ ಜೊತೆಗೆ ವಿಡಿಯೋ ರವಾನೆ ಮಾಡಲಾಗಿದೆ. ಅಗತ್ಯವಿದ್ದರೆ ಬೇರೆ ತುಣುಕುಗಳನ್ನು ಮತ್ತೆ ಎಫ್ ಎಸ್ ಎಲ್ ಗೆ ಪೊಲೀಸರು ನೀಡಲಿದ್ದಾರೆ. ಸದ್ಯ ಎಸ್ ಎಲ್ ವರದಿಗಾಗಿ ವಿಧಾನಸೌಧದ ಪೊಲೀಸರು ಕಾಯುತ್ತಿದ್ದಾರೆ.ವರದಿ ಬಂದ ಮೇಲೆ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.