ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂದಿಸಿರುವ ಆರೋಪಿಗಳ ಮೊಬೈಲ್ ನಲ್ಲಿರುವ ಡಾಟಾ ಗಳನ್ನು ಪೊಲೀಸ್ ಅಧಿಕಾರಿಗಳೇ ಡಿಲೀಟ್ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ.
ಆಸಿಡ್ ದಾಳಿ ಪ್ರಕರಣ: 3 ವಿದ್ಯಾರ್ಥಿನಿಯರನ್ನು ಭೇಟಿಯಾದ ಮಹಿಳಾ ಆಯೋಗದ ಅಧ್ಯಕ್ಷೆ, ತಲಾ 4 ಲಕ್ಷ ಪರಿಹಾರ ಭರವಸೆ!
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಇದೀಗ, ಪ್ರಕರವನ್ನು ಮುಚ್ಚಿ ಹಾಕಲು ಪೊಲೀಸರು ಮುಂದಾಗಿದ್ದರು ಎನ್ನಲಾಗುತ್ತಿದೆ.ಆರೋಪಿಗಳ ಮೊಬೈಲ್ನಲ್ಲಿದ್ದ ಡಾಟಾವನ್ನು ಪೊಲೀಸರು ಕೂಡಲೇ ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ!
ವಿಧಾನಸೌಧದಲ್ಲಿ ಆರೋಪಿಗಳ ಮೊಬೈಲ್ ಗಳಲ್ಲಿರುವ ಮೊಬೈಲ್ ಪಡೆದು ಎಲ್ಲವು ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೈ ನಾಯಕರ ಜೊತೆಗೆ ಇದ್ದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿದ್ದ ಅವರ ಪ್ರೊಫೈಲ್ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಆರೋಪಿಗಳು ಕಾಂಗ್ರೆಸ್ ನಾಯಕರು ಜೊತೆಗೆ ಇರುವಂತಹ ಹಲವು ಫೋಟೋಗಳನ್ನು ವಿಡಿಯೋಗಳು ಆಗಿರಬಹುದು ಅಥವಾ ಅವರ ಪ್ರೊಫೈಲ್ ಗಳು ಆಗಿರಬಹುದು ಒತ್ತಡದಿಂದ ಪೊಲೀಸ್ ಅಧಿಕಾರಿಗಳು ಆರೋಪಿಗಳ ಮೊಬೈಲ್ ನಲ್ಲಿರುವ ಡಾಟಾ ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿದುಬಂದಿದೆ.