ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ನಡುವೆ ಐಸಿಸಿ ಟಿ20 ಅವರಿಗೆ ಬಹುಮಾನದ ಮೊತ್ತವನ್ನು ತಿಳಿಸಿದ್ದು, ಸೆಮಿಫೈನಲ್, ಫೈನಲ್ ಮತ್ತು ಪ್ರಶಸ್ತಿಗೆ ಎಷ್ಟು ಮೊತ್ತದ ಹಣ ನಿಡಲಾಗುತ್ತದೆ ಎಂಬುದರ ಕುರಿತಂತೆ ಮಾಹಿತಿ ನೀಡಿದೆ.
BIG NEWS: ಮಠದ ಸಿಬ್ಬಂದಿ ವೇತನ ಚೆಕ್ಗೆ ಸಹಿ ಹಾಕಲು ಮುರುಘಾ ಶರಣರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಇಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಹೇಳಿಕೆ ನೀಡುವ ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಟಿ20 ಬುಹುಮಾನದ ಮೊತ್ತ
ನವೆಂಬರ್ 13 ರಂದು ಮೆಲ್ಬೋರ್ನ್ನಲ್ಲಿ ನಡೆಯುವ ಐಸಿಸಿ ಟಿ 20 ರಿಂದ ಫೈನಲ್ನಲ್ಲಿ ಗೆಲ್ಲುವ ತಂಡವು US $ 1.6 ಮಿಲಿಯನ್ ಬಹುಮಾನವನ್ನು ಪಡೆಯುತ್ತದೆ. ಅಂದರೆ 13 ಕೋಟಿ ರೂ. ಬಹುಮಾನ ಸಿಗಲಿದೆ. ಅದೇ ಸಮಯದಲ್ಲಿ ರನ್ನರ್ ಅಪ್ ತಂಡಕ್ಕೆ 8 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು ಆರೂವರೆ ಕೋಟಿ ರೂ. ಬಹುಮಾನ ಸಿಗಲಿದೆ. ಟಿ20 ಮೊತ್ತದ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 45 ಕೋಟಿ ಆಗಿದೆ.
The prize pot for the 2022 #T20WorldCup in Australia has been revealed 👀
Full details 👇https://t.co/Vl507PynsJ
— ICC (@ICC) September 30, 2022
ಈ ಬಾರಿ ಒಟ್ಟು 16 ತಂಡಗಳಲ್ಲಿ ಭಾಗವಹಿಸಲಿದ್ದು, 8 ತಂಡಗಳು ಅಕ್ಟೋಬರ್ 16 ರಿಂದ 21 ರವರೆಗೆ ಅರ್ಹತಾ ಪಂದ್ಯಗಳನ್ನು ಆಡಲಿವೆ. ಅದರಲ್ಲಿ ಅಗ್ರ 4 ತಂಡಗಳು ಅಗ್ರ 8 ತಂಡಗಳೊಂದಿಗೆ ನೇರವಾಗಿ ಸೂಪರ್ 12 ರಲ್ಲಿ ಅರ್ಹತೆ ಪಡೆಯುತ್ತವೆ.
ಯಾವ ತಂಡಕ್ಕೆ ಎಷ್ಟು ಮೊತ್ತದ ಹಣ?
ಐಸಿಸಿ ಪ್ರಕಾರ, ಸೆಮಿಫೈನಲ್ನಲ್ಲಿ ಸೋತ ತಂಡವು ಒಟ್ಟು ಬಹುಮಾನದ ಮೊತ್ತದಲ್ಲಿ $ 4 ಲಕ್ಷ (3.26 ಕೋಟಿ ರೂ.) ಪಡೆಯುತ್ತದೆ. ಅದೇ ಸಮಯದಲ್ಲಿ, ಸೂಪರ್ 12 ರ ಸುತ್ತಿನಿಂದ ಹೊರಗುಳಿದ 8 ತಂಡಗಳಲ್ಲಿ, ಪ್ರತಿ ತಂಡವು 70 ಸಾವಿರ ಡಾಲರ್ (57 ಲಕ್ಷ) ಬಹುಮಾನವಾಗಿ ಪಡೆಯುತ್ತದೆ. ಕಳೆದ ವರ್ಷದ ಐಸಿಸಿ ಟಿ20 ಅದರಂತೆಯೇ ಸೂಪರ್-12 ಸುತ್ತಿನ ಮೂವತ್ತು ಪಂದ್ಯಗಳ ಪ್ರತಿ ಗೆಲುವಿಗೆ 40 ಸಾವಿರ ಅಮೆರಿಕನ್ ಡಾಲರ್ಗಳನ್ನು ತಂಡ ಪಡೆಯಲಿದೆ.
ಅದೇ ರೀತಿ ಸೂಪರ್ 12 ಹಂತಕ್ಕೆ ಪ್ರವೇಶಿಸಲು ಈ ತಂಡಗಳ ನಡುವಿನ ಪಂದ್ಯಗಳ ಮೊದಲ ಸುತ್ತಿನಲ್ಲಿ ಗೆದ್ದರೆ ತಂಡಕ್ಕೆ 40 ಸಾವಿರ ಅಮೆರಿಕನ್ ಡಾಲರ್ (32 ಲಕ್ಷ ರೂಪಾಯಿ) ಸಿಗಲಿದೆ. ಮೊದಲ ಸುತ್ತಿನಲ್ಲಿ ಎಲಿಮಿನೇಟ್ ಆಗುವ ನಾಲ್ಕು ತಂಡಗಳಿಗೆ ತಲಾ 40 ಸಾವಿರ ಡಾಲರ್ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪು ಮಾಡಿದ್ರೆ ₹25,000 ದಂಡ ತೆತ್ತು, 3 ವರ್ಷ ಜೈಲು ಸೇರ್ಬೇಕಾಗುತ್ತೆ