ಬೆಂಗಳೂರು : ಕೆಎಸ್ಆರ್ಟಿಸಿಯು ನೂತನ ವಾಹನ ಸೇವೆಗಳಿಗೆ ಮುಂದಾಗಿದ್ದು, ಬ್ರಾಂಡಿಂಗ್ ಪರಿಕಲ್ಪನೆಯನ್ನು ಜರನ ತೀರ್ಮಾನಕ್ಕೆ ಬಿಟ್ಟಿದೆ. ಬಿಎಸ್ 6-9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಮತ್ತು ಒಲೆಕ್ಸಾ ಎಲೆಕ್ಟ್ರಿಕ್ ಈ ಎರಡು ಮಾದರಿಯ ಬಸ್ಗಳಿಗೆ ನಿಮ್ಮ ಉತ್ತಮವಾದ ಐಡಿಗಳನ್ನು ಕಳುಹಿಸುವ ಮೂಲಕ ನಗದು ಬಹುಮಾನವನ್ನು ಪಡೆಯಬಹುದು ಎಂದು ತಿಳಿಸಿದೆ.
ನೂತನ ಶ್ರೇಣಿಯ ಎರಡು ರೀತಿಯ ಬಸ್ಗಳಿಗೆ ತಮ್ಮಿಂದ ಸೂಕ್ತವಾದ ಬ್ರಾಂಡ್, ಹೆಸರು, ಟ್ಯಾಗ್ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸಗಳನ್ನು ನಿರೀಕ್ಷಿಸುತ್ತಿದೆ. ಅಲ್ಲದೇ ಉತ್ತಮ ಟ್ಯಾಗ್ನೊಂದಿಗೆ ಬ್ರಾಡ್ ಹೆಸರನ್ನು ಯಾರು ಸೂಚಿಸುತ್ತಾರೆಯೋ ಅಂತಹವರಿಗೆ 10,000 ರೂಪಾಯಿ ನಗದು ಬಹುಮಾನವನ್ನು ಕೊಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಅಲ್ಲದೆ ಉತ್ತಮವಾಗಿ ಗ್ರಾಫಿಕ್ಸ್ ನೀಡಿದವರಿಗೆ 25,000 ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದೆ. ನೀವು ಮಾಡುವ ಬ್ರಾಂಡ್ ಐಡಿಯಾಗಳನ್ನು cpro@ksrtc.org ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅಥವಾ ಟ್ವಿಟರ್ ಖಾತೆಯಾದ KSRTC-journeys, KSRTC.karnataka ಫೇಸ್ ಬುಕ್ ಐಡಿಗೆ ಕಳುಹಿಸಬಹುದಾಗಿದೆ. ನೀವು ಡಿಸೆಂಬರ್ 05, 2022ರ ಒಳಗೆ ನಿಮ್ಮ ಐಡಿಯಾಗಳನ್ನು ಕಳುಹಿಸಬೇಕು ಎಂದು ತಿಳಿಸಿದೆ.
ಕೆ.ಎಸ್.ಆರ್.ಟಿ.ಸಿ.ಯ ನೂತನ ವಾಹನ ಸೇವೆಗಳಗೆ
ಬ್ರಾಂಡಿಂಗ್ ಪರಿಕಲ್ಪನೆ pic.twitter.com/21gfRLGSWw— KSRTC (@KSRTC_Journeys) November 28, 2022
ಕೆಎಸ್ಆರ್ಟಿಸಿ ನೂತನ ಪ್ರಯೋಗಕ್ಕೆ ಮುಂದಾಗಿದ್ದ, ಬಸ್ಗೆ ಟ್ಯಾಗ್ಲೈನ್, ಬ್ರಾಂಡ್, ಗ್ರಾಫಿಕ್ಸ್ ಆಯ್ಕೆ ಮಾಡಲು ಜನರಮೊರೆ ಹೋಗಿದೆ. ಯಾರು ಉತ್ತಮವಾದ ಬ್ರಾಂಡ್, ಟ್ಯಾಗ್ಗಳನ್ನು ಸೂಚಿಸುತ್ತಾರೆಯೋ ಅಂತಹವರಿಗೆ ನಗದು ಬಹುಮಾನ ಕೊಡುವುದಾಗಿ ಘೋಷಿಸಿದೆ.
ಮತ್ತೇಕೆ ತಡ ಆಕರ್ಷಕ ಬ್ರಾಂಡ್, ಟ್ಯಾಗ್ಲೈನ್ ಗ್ರಾಫಿಕ್ಸ್ಗಳನ್ನು ಕೊಟ್ಟು ನಗದು ಬಹುಮಾನವನ್ನು ತಮ್ಮದಾಗಿಸಿಕೊಳ್ಳಿ. ಇದೊಂದು ಉತ್ತಮ ಅವಕಾವಾಗಿದ್ದು, ಡಿಸೆಂಬರ್ 5ರ ಒಳಗೆ ನಿಮ್ಮ ಐಡಿಯಾಗಳನ್ನು ಇಲ್ಲಿ ಕೊಟ್ಟಿರುವ ವಿಳಾಸದಲ್ಲಿ ಹಂಚಿಕೊಳ್ಳಿ. ಇನ್ನು ಗ್ರಾಫಿಕ್ಸ್ ಡಿಸೈನರ್ಗಳಿಗೂ ಕೂಡ ಇಲ್ಲಿ ಅವಕಾಶವಿದ್ದು, ಉತ್ತಮವಾಗಿ ಗ್ರಾಫಿಕ್ಸ್ನಲ್ಲಿ ಬಸ್ನ ಲೋಗೊ, ಟ್ಯಾಗ್ಲೈನ್ಗಳನ್ನು ನಿಮ್ಮ ಶೈಲಿಯಲ್ಲಿಯೇ ಪ್ರಸ್ತುತಪಡಿಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಕೆಎಸ್ಆರ್ಟಿಸಿ ನೂತನ ಪ್ರಯೋಗಗಳಿಗೆ ಕೈಹಾಕುತ್ತಿದ್ದು, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಪ್ರತಿವರ್ಷವೂ ದಸರಾ, ಷಷ್ಠಿ, ಶಬರಿ ಮಲೆಗೆ ತೆರಳುವ ಭಕ್ತಾದಿಗಳಿಗೂ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸತ್ತಾ ಬಂದಿದೆ. ಹಾಗೆಯೇ ಇತ್ತೀಚೆಗೆ ಇನ್ನು ಒಂದು ಹೆಜ್ಜೆ ಮುಂದುವರೆದು ಹೊಸ ವಿನ್ಯಾಸದತ್ತ ಹೊರಟಿರುವುದು ಇನ್ನು ವಿಶೇಷವಾಗಿದೆ.