ಬೆಂಗಳೂರು: ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ಮತ್ತೆ ಮುಂದೂಡಿಕೆಯಾಗಿದೆ ಎಂದು ಕೆಪಿಸಿಸಿ ಅಧಿಕೃತ ಮಾಹಿತಿ ನೀಡಿದೆ. ಎರಡನೇ ಬಾರಿಗೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ಮುಂದೂಡಿಕೆಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸುವುದನ್ನು ಪ್ರಿಯಾಂಕಾ ಗಾಂಧಿ ಮುಂದೂಡಿದ್ದಾರೆ. ಅ.22 ಕ್ಕೆ ರಾಯಚೂರಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ನಿಗದಿಯಂತೆ ಪ್ರಿಯಾಂಕಾ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಪ್ರಿಯಾಂಕಾ ಗಾಂಧಿ ಅವರು ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಯಾತ್ರೆ ಕೊನೆಗೊಳ್ಳುವ ಮೊದಲು ಖಂಡಿತವಾಗಿಯೂ ಪಾಲ್ಗೊಳ್ಳುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
BIGG NEWS : 545 ‘PSI’ ಅಕ್ರಮ ನೇಮಕಾತಿ ಪ್ರಕರಣ : ಹೆಡ್ ಕಾನ್ಸ್ ಟೇಬಲ್ ಸೇರಿ ಮತ್ತೆ ಮೂವರು ಆರೋಪಿಗಳು ಅರೆಸ್ಟ್