ಬೆಂಗಳೂರು : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆಯಲ್ಲಿ ಭಾಗವಹಿಸಬೇಕಾಗಿದ್ದ ಪ್ರಿಯಾಂಕಾ ಗಾಂಧಿ ಅವರು , ‘ನಾ ನಾಯಕಿ’ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
BIGG NEWS : ಹುಬ್ಬಳ್ಳಿ ಜನತೆ ‘ಪವರ್’ ಶಾಕ್..! ಈ ಪ್ರದೇಶಗಳಲ್ಲಿ ಜ.5 ರಿಂದ ಜ.14 ರವರೆಗೆ ವಿದ್ಯುತ್ ಕಟ್
ಮಹಿಳಾ ಕಾಂಗ್ರೆಸ್ ರಾಜ್ಯಾದ್ಯಂತ ಆಯೋಜಿಸಿದ್ದ ‘ನಾ ನಾಯಕಿ’ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್ನ ನೂತನ ಕಚೇರಿ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ..
BIGG NEWS : ಹುಬ್ಬಳ್ಳಿ ಜನತೆ ‘ಪವರ್’ ಶಾಕ್..! ಈ ಪ್ರದೇಶಗಳಲ್ಲಿ ಜ.5 ರಿಂದ ಜ.14 ರವರೆಗೆ ವಿದ್ಯುತ್ ಕಟ್
ಜ. 6ರಂದು ಬೆಂಗಳೂರಿನ ನಗರಕ್ಕೆ ‘ಭಾರತ್ ಜೋಡೋ ಭವನ’ ಉದ್ಘಾಟನೆಗಾಗಿ ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ.
BIGG NEWS : ಹುಬ್ಬಳ್ಳಿ ಜನತೆ ‘ಪವರ್’ ಶಾಕ್..! ಈ ಪ್ರದೇಶಗಳಲ್ಲಿ ಜ.5 ರಿಂದ ಜ.14 ರವರೆಗೆ ವಿದ್ಯುತ್ ಕಟ್
ಜ.9ರಂದು ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುಮಾರು ಆರು ವರ್ಷಗಳ ದೀರ್ಘ ಅವಧಿಯಲ್ಲಿ 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತ ಜೋಡೋ ಭವನವನ್ನು ಉದ್ಘಾಟಿಸಲಿದ್ದಾರೆ.
ಈ ಬೃಹತ್ ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿದ್ದು, ನೆಲ ಹಾಗೂ ಮೊದಲ ಮಹಡಿ ಒಗ್ಗೂಡಿ ಬೃಹತ್ ಆಡಿಟೋರಿಯಂ ಹೊಂದಿದೆ. ಎರಡನೇ ಮಹಡಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಕಚೇರಿಗಳು ಇರಲಿವೆ. ಇದಲ್ಲದೆ, ಎರಡು ತಳ ಮಹಡಿಗಳನ್ನು ವಾಹನ ನಿಲುಗಡೆಗಾಗಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಾಜ್ಯದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ಆಗಮನಕ್ಕಾಗಿ ಭರ್ಜರಿಯಾಗಿ ಸಿದ್ದತೆ ಮಾಡಲು ಮುಂದಾಗಿದ್ದಾರೆ.
BIGG NEWS : ಹುಬ್ಬಳ್ಳಿ ಜನತೆ ‘ಪವರ್’ ಶಾಕ್..! ಈ ಪ್ರದೇಶಗಳಲ್ಲಿ ಜ.5 ರಿಂದ ಜ.14 ರವರೆಗೆ ವಿದ್ಯುತ್ ಕಟ್