ನವದೆಹಲಿ: ನಿರುದ್ಯೋಗ ಮತ್ತು ಬೆಲೆ ಏರಿಕೆಯ ವಿರುದ್ಧ ಇಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯ ಸಂಕೇತವಾಗಿ ಇತರ ಪಕ್ಷದ ನಾಯಕರಂತೆ ಕಪ್ಪು ಬಟ್ಟೆಯನ್ನು ಧರಿಸಿದ್ದರು. ಪೊಲೀಸರು ಪ್ರೀಯಾಂಕರನ್ನು ಬಂಧಿಸುವ ಮೊದಲು ಪ್ರತಿಭಟನಾಕಾರರು ಬ್ಯಾರಿಕೇಡ್ಗಳ ಮೇಲೆ ಹತ್ತಿ ಸ್ವಲ್ಪ ಸಮಯದವರೆಗೆ ಧರಣಿ ನಡೆಸಿದರು.
ಪ್ರೀಯಾಂಕಾ ಅವರನ್ನು ಬಂಧನಕ್ಕೂ ಮೊದಲು ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಂಧಿಸಿದ್ದರು. ಜಿಟಿಬಿ ನಗರದ ಕಿಂಗ್ಸ್ವೇ ಕ್ಯಾಂಪ್ನಲ್ಲಿರುವ ಸಭಾಂಗಣಕ್ಕೆ ನಾಯಕರನ್ನು ನಿರ್ಬಂಧಿಸಲಾಗಿತ್ತು.
#WATCH | Police detain Congress leader Priyanka Gandhi Vadra from outside AICC HQ in Delhi where she had joined other leaders and workers of the party in the protest against unemployment and inflation.
The party called a nationwide protest today. pic.twitter.com/JTnWrrAT9T
— ANI (@ANI) August 5, 2022
ರಾಷ್ಟ್ರಪತಿ ಭವನಕ್ಕೆ ಯೋಜಿತ ಮೆರವಣಿಗೆ ಮೊದಲು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿದ್ದರು. ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ಸರ್ಕಾರ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಗದ್ದಲ ಸೃಷ್ಟಿಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.