ಕಲಬುರಗಿ : ಏಪ್ರಿಲ್ 14ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಕರ್ನಾಟಕದಲ್ಲಿ ಮತ ಬೇಟೆ ನಡೆಸಲಿದ್ದಾರೆ ಇದೀಗ ಮೋದಿ ಅವರ ರಾಜ್ಯ ಪ್ರವಾಸಕ್ಕೆ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದು 10 ವರ್ಷದಲ್ಲಿ ಕನ್ನಡಿಗರಿಗೆ ಏನು ಮಾಡಿದ್ದೀರಿ ಎಂದು ತಿಳಿಸಿ ಎಂದು ವಾಗ್ದಾಳಿ ನಡೆಸಿದರು.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ರಾಜ್ಯ ಪ್ರವಾಸಕ್ಕೆ ಕಿಡಿ ಕಾರಿದ ಪ್ರಿಯಾಂಕ ಖರ್ಗೆ ಅವರು ದೇಶದ ಪ್ರಧಾನಿ ಎಲ್ಲಾದರೂ ಪ್ರಚಾರ ಮಾಡಬಹುದು.ಆದರೆ ರಾಜ್ಯಕ್ಕೆ ಬಂದು ನಮಗೇನು ಕೊಟ್ಟಿದ್ದಾರೆ ಎಂದು ಅವರು ಹೇಳಲಿ.ಬರ ನಿರ್ವಹಣೆಗೆ ಏಕೆ ದುಡ್ಡು ಕೊಟ್ಟಿಲ್ಲ ಅಂತ ತಿಳಿಸಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
BREAKING : ಆಂಧ್ರಪ್ರದೇಶದಲ್ಲಿ ಯುಗಾದಿ ರಥೋತ್ಸವದ ವೇಳೆ ಘೋರ ದುರಂತ : ವಿದ್ಯುತ್ ಸ್ಪರ್ಶದಿಂದ 13 ಮಕ್ಕಳಿಗೆ ಗಾಯ
ಸುಮ್ಮನೆ ಪ್ರವಾಸಿಗರಂತೆ ಬಂದು ಹೋದರೆ ಏನು ಪ್ರಯೋಜನ? ಏಕೆ ತಾರತಮ್ಯಮಾಡುತ್ತಿದ್ದೀರಾ ಎಂದು ಜನರಿಗೆ ಉತ್ತರ ಕೊಡಿ ಹತ್ತು ವರ್ಷದಲ್ಲಿ ಕನ್ನಡಿಗರಿಗೆ ಏನು ಮಾಡಿದ್ದೀರಿ ಅಂತ ಹೇಳಿ ಸುಮ್ಮನೆ ಬಂದ ಪುಟ್ಟ ಹೋದ ಪುಟ್ಟ ಅಂದರೆ ಹೇಗೆ? ಎಂದು ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.