ಬೆಂಗಳೂರು : ದಸರಾ ಹಬ್ಬದ ವೇಳೆ ಪ್ರಯಾಣಿಕರ ಲೂಟಿ ಮಾಡುವುದು ತಿಳಿದುಬಂದಿದೆ. ಪ್ರಯಾಣಿಕರ ಬಳಿ ಹೆಚ್ಚುವರಿ ಹಣ ಸುಲಿಗೆ ಮಾಡದಂತೆ ಬಸ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದೇವೆಂದು ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ದಸರ ಹಬ್ಬ ಹಿನ್ನೆಲೆ ಬೆಂಗಳೂರಿನಿಂದ ರಾಜ್ಯ ವಿವಿಧೆಡೆ ತೆರಳುವ ಖಾಸಗಿ ಬಸ್ಗಳ ಟಿಕೆಟ್ ದರ 2-3 ಪಟ್ಟು ಹೆಚ್ಚಳವಾಗಿದೆ. ಊರಿಗೆ ತೆರಳುವ ಜನರಲ್ಲಿ ಖಾಸಗಿ ಬಸ್ಗಳು ಹೆಚ್ಚಿನ ಹಣ ಸುಲಿಗೆ ಮಾಡಲಾಗುತ್ತಿದೆ. ಖಾಸಗಿ ಬಸ್ಗಳ ವೆಬ್ಸೈಟ್, ಬಸ್ ಬುಕ್ಕಿಂಗ್ ಆ್ಯಪ್ಗಳ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿವರೆಗೂ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಖಾಸಗಿ ಬಸ್ಗಳ ದರ ಸಾಮಾನ್ಯ ದಿನಗಳಿಗಿಂತ 2-3 ಪಟ್ಟು ಹೆಚ್ಚಾಗಿದೆ .
ಯಾವ ಊರಿಗೆ ಟಿಕೆಟ್ ದರ ಎಷ್ಟುಹೆಚ್ಚಳ ?
ಬೆಂಗಳೂರು-ಬೆಳಗಾವಿ ಸಾಮಾನ್ಯ ದಿನ ದರ: 750-850, ಹಬ್ಬದ ದರ:1500-2000
ಬೆಂಗಳೂರು-ಹುಬ್ಬಳ್ಳಿ ಸಾಮಾನ್ಯ ದಿನ ದರ: 500-750 ಹಬ್ಬದ ದರ:1300-2000
ಬೆಂಗಳೂರು-ಶಿವಮೊಗ್ಗ ಸಾಮಾನ್ಯ ದಿನ ದರ: 400-700 ಹಬ್ಬದ ದರ: 900-1400
ಬೆಂಗಳೂರು-ಮಂಗಳೂರು ಸಾಮಾನ್ಯ ದಿನ ದರ: 650-850 ಹಬ್ಬದ ದರ: 1100-1600
ಬೆಂಗಳೂರು -ದಾವಣಗೆರೆ ಸಾಮಾನ್ಯ ದಿನ ದರ: 400-600 ಹಬ್ಬದ ದರ: 900 -1200
ಬೆಂಗಳೂರು-ಹೊಸಪೇಟೆ ಸಾಮಾನ್ಯ ದಿನ ದರ: 500-750 ಹಬ್ಬದ ದರ: 1000-1400
ಬೆಂಗಳೂರು-ಬೀದರ್ ಸಾಮಾನ್ಯ ದಿನ ದರ: 650-900 ಹಬ್ಬದ ದರ: 1200-1800
ಬೆಂಗಳೂರು-ಮುಂಬೈ ಸಾಮಾನ್ಯ ದಿನ ದರ: 1100-1300 ಹಬ್ಬದ ದರ: 1500-3000
ಬೆಂಗಳೂರು- ಪುಣೆ ಸಾಮಾನ್ಯ ದಿನ ದರ: 800-1200 ಹಬ್ಬದ ದರ: 1600-2500
ಬೆಂಗಳೂರು-ಚೆನ್ನೈ ಸಾಮಾನ್ಯ ದಿನ ದರ: 650-800 ಹಬ್ಬದ ದರ: 1200-1500
ಬೆಂಗಳೂರು-ಹೈದರಾಬಾದ್ ಸಾಮಾನ್ಯ ದಿನ ದರ: 750-100 ಹಬ್ಬದ ದರ: 1400-1600
ಪ್ರತಿ ಹಬ್ಬ ಬಂದಾಗಲೂ ಸಾಮಾನ್ಯವಾಗಿ ಖಾಸಗಿ ಬಸ್ಸುಗಳು ಈ ಮೇಲಿನ ದರಗಳಷ್ಟು ಏರಿಕೆ ಮಾಡಲಾಗುತ್ತಿದೆ.