ಮಂಡ್ಯ: ಪ್ರಧಾನಿ ಮಂತ್ರಿಗಳಾದ ನರೇಂದ್ರ ದಾಮೋದರ ದಾಸ್ ಮೋದಿಯವರು 2026 ರ ಏಪ್ರಿಲ್ 15 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಶಿಷ್ಠಾಚಾರದಂತೆ ಅಧಿಕಾರಿಗಳಿಗೆ ವಹಿಸಿರುವ ಕೆಲಸವನ್ನು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳಾದ ಡಾ ಕುಮಾರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮದ ಹಿನ್ನೆಲ್ಲೆಯಲ್ಲಿ ಭದ್ರತೆ, ಶಿಷ್ಟಾಚಾರ ಮತ್ತು ಸಾರ್ವಜನಿಕ ವ್ಯವಸ್ಥೆಗಳ ಕುರಿತು ಸಭೆ ನಡೆಸಿ ಮಾತನಾಡಿದರು.
ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಗುರು ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಮಂದಿರದ (ಗದ್ದುಗೆ) ಲೋಕಾರ್ಪಣೆ ಮತ್ತು ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಪ್ರಧಾನಿಯವರು ನೆರವೇರಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ದಿನದಂದು ಪ್ರಧಾನಯವರು ಹಾಗೂ ಅವರ ಭದ್ರತಾ ಸಿಬ್ಬಂದಿಗಳು ಆಗಮಿಸಲು 3 ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು. ಹೆಲಿಪ್ಯಾಡ್ ನ ಪಕ್ಕದಲ್ಲಿ ಗ್ರೀನ್ ಹೌಸ್ ನಿರ್ಮಾಣ, ಕಾರ್ಯಕ್ರಮ ನಡೆಯುವ ಸಮಯದಲ್ಲಿ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಸೂಕ್ತ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಸ್ಧಳದಲ್ಲಿ ಹಾಗೂ ಗ್ರೀನ್ ರೂಂ ನಲ್ಲಿ ಬಿಎಸ್ಎನ್ಎಲ್ ನಿಂದ ಅಗತ್ಯ ಇಂಟರ್ ನೆಟ್ ಹಾಗೂ ಟೆಲಿಫೋನ್ ಸಂಪರ್ಕ ನೀಡಲು ಅಗತ್ಯ ಕ್ರಮವಹಿಸಬೇಕು. ಪ್ರಧಾನ ಮಂತ್ರಿಗಳು ಜೊತೆ ಆಗಮಿಸುವ ಅಧಿಕಾರಿಗಳ ಲಗೇಜ್ ನಿರ್ವಹಣೆ 5 ಜನರನ್ನು ನೇಮಿಸಿ, ಪ್ರಧಾನ ಮಂತ್ರಿಗಳು ಹೆಲಿಪ್ಯಾಡ್ ನಿಂದ ಕಾರ್ಯಕ್ರಮಕ್ಕೆ ಬರುವ ಹಾದಿಯನ್ನು ಸ್ವಚ್ಚವಾಗಿ ನಿರ್ವವಹಣೆ ಮಾಡಬೇಕು ಹಾಗೂ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು. ಅಗ್ನಿಶಾಮಕ ದಳ ಮತ್ತು ಆಂಬುಲೆನ್ಸ್ ಹೆಲಿಪ್ಯಾಡ್ ಹತ್ತಿರ ಹಾಗೂ ಕಾರ್ಯಕ್ರಮದ ಹತ್ತಿರ ಇದ್ದು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿ. ಜೆ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ. ಸಿ. ಶಿವಾನಂದ ಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹೋದ್ಯೋಗಿಯ ಎದೆಯ ಭಾಗವನ್ನು ದಿಟ್ಟಿಸಿ ನೋಡುವುದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್
ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!








