ಬೆಂಗಳೂರು : ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಬೆಂಗಳೂರಿನ ದೇವನಹಳ್ಳಿಯ ಏರೋಸ್ಪೇಸ್ ಸಿಟಿಯಲ್ಲಿ ಜ.19ರಂದು ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಬೆಳಗ್ಗೆ 8ರಿಂದ ಸಾಯಂಕಾಲ 6 ಗಂಟೆವರೆಗೆ ಏರ್‌ಪೋರ್ಟ್ ಸುತ್ತಮುತ್ತಲ ಭಾಗಗಳಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ, ಸಂಚಾರ ಮಾರ್ಗಬದಲಾವಣೆ ಮಾಡಿ ನಗರ ಸಂಚಾರ ಪೊಲೀಸರು ಕ್ರಮ ವಹಿಸಿದ್ದಾರೆ.
ವೈಟ್ ಫೀಲ್ಡ್, ಕೆಆರ್‌ಪುರದಿಂದ ಏರ್‌ಪೋರ್ಟ್‌ಗೆ ಹೋಗುವವರು ಗೊಲ್ಲಹಳ್ಳಿ ಗೇಟ್ ಬಲತಿರುವು-ಜೊನ್ನಹಳ್ಳಿ ಗೇಟ್ -ಬೆಟ್ಟಕೋಟೆ-ಏರ್‌ಲೈನ್ ಡಾಬಾ ಎಡತಿರುವು-ದೇವನಹಳ್ಳಿ ಬಸ್ ನಿಲ್ದಾಣ-ಎಡ ತಿರುವು-ದೇವನಹಳ್ಳಿ ಬೈಪಾಸ್ -ಎಡತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್ -ಎಡತಿರುವು ತೆಗೆದುಕೊಂಡು ಏರ್ ಪೋರ್ಟ್ ಗೆ ತೆರಳಬಹುದು.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ, ಏರ್‌ಲೈನ್ ಡಾಬಾ ಜಂಕ್ಷನ್ ಕಡೆಯಿಂದ ಏರ್‌ಪೋರ್ಟ್‌ಗೆ ತೆರಳುವವರು ಏರ್‌ಲೈನ್ಸ್ ಡಾಬಾ-ದೇವನಹಳ್ಳಿ ಬಸ್ ನಿಲ್ದಾಣ-ಎಡತಿರುವು-ದೇವನಹಳ್ಳಿ ಬೈಪಾಸ್-ಎಡತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್ -ಎಡತಿರುವು ಮೂಲಕ ಏರ್‌ಪೋರ್ಟ್ ಗೆ ತೆರಳಬಹುದು.
ಅಲ್ಲದೆ ಹೆಣ್ಣೂರು-ಬಾಗಲೂರು ಕಡೆಯಿಂದ ಏರ್‌ಪೋರ್ಟ್‌ಗೆ ಹೋಗುವವರು ಗಾಳಮ್ಮ ಸರ್ಕಲ್- ಬಾಗಲೂರು
ಗುಂಡಪ್ಪ ಸರ್ಕಲ್ -ಎಡತಿರುವು-ರೇವಾ ಕಾಲೇಜು ಜಂಕ್ಷನ್ -ಬಾಗಲೂರುಕ್ರಾಸ್-ಬಲ ತಿರುವು-ಚಿಕ್ಕಜಾಲ-ಸಾದಹಳ್ಳಿ ಟೋಲ್ -ಏರ್ ಪೋರ್ಟ್ ಮೇಲೇತುವೆ ಪ್ರವೇಶ ಮಾಡುವ ಮುಖಾಂತರ ಏರ್‌ಪೋರ್ಟ್ಗೆ ತಲುಪಬಹುದು.
ಹಾಗೆಯೇ ಚಿಕ್ಕಜಾಲ ಕೋಟೆ ಕ್ರಾಸ್ ಕಡೆಯಿಂದ ಏರ್‌ಪೋರ್ಟ್‌ಗೆ: ಚಿಕ್ಕಜಾಲ-ಸಾದಹಳ್ಳಿ ಟೋಲ್- ಏರ್ ಪೋರ್ಟ್ ಮೇತುವೆ – ಏರ್‌ಪೋರ್ಟ್ಗೆ ತಲುಪಬಹುದಾಗಿದೆ.ಬಾಗಲೂರು ಕಡೆಯಿಂದ ಏರ್‌ಪೋರ್ಟ್ ಗೆ ತೆರಳುವವರು ಗಾಳಮ್ಮ ಸರ್ಕಲ್- ಬಾಗಲೂರು ಕಾಲೊನಿ ಬಲ ತಿರುವು- ರಜಾಕ್‌ಪಾಳ್ಯ – ಎಂವಿಐಟಿ ಕಾಲೇಜು -ಚಿಕ್ಕಜಾಲ ಬಲ ತಿರುವು – ಬಿಬಿ ರಸ್ತೆ – ಸಾದಹಳ್ಳಿ ಟೋಲ್- ಏರ್ ಪೋರ್ಟ್ ಮೇತುವೆ ಮೂಲಕ ಪ್ರವೇಶಿಸಬಹುದು.