ಗೋಮತಿ (ತ್ರಿಪುರಾ): ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರ ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದಲ್ಲಿರುವ ಪೂರ್ವಜರ ಮನೆಯ ಮೇಲೆ ಮಂಗಳವಾರ ತಡರಾತ್ರಿ ಅಪರಿಚಿತರು ದಾಳಿ ನಡೆಸಿದ್ದು, ಅಲ್ಲಿದ್ದ ಅರ್ಚಕರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಉದಯಪುರದ ಜಮ್ಜುರಿ ಪ್ರದೇಶದ ರಾಜನಗರದಲ್ಲಿರುವ ದೇಬ್ ಅವರ ನಿವಾಸಕ್ಕೆ ಪುರೋಹಿತರ ಗುಂಪು ಆಗಮಿಸಿದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದೇಬ್ ಅವರ ತಂದೆಯ ವಾರ್ಷಿಕ ಶ್ರಾದ್ಧ ಸಮಾರಂಭದಲ್ಲಿ ಯಜ್ಞ ಮಾಡಲು ಅರ್ಚಕರು ಬಂದಿದ್ದರು. ಈ ವೇಳೆ ದೇಬ್ ಅವರ ನಿವಾಸಕ್ಕೆ ದುಷ್ಕರ್ಮಿಗಳು ನುಗ್ಗಿ ಹಲ್ಲೆ ನಡೆಸಿದ್ದಾರೆ.
Former #Tripura CM #BiplabDeb’s ancestral house in Udaipur, Tripura ransacked & torched by miscreants. His house was attacked today ahead of a ‘yagna’ scheduled to be held tomorrow to mark his father’s death anniversary. pic.twitter.com/5qD26pRbzb
— Pooja Mehta (@pooja_news) January 3, 2023
ವರದಿಗಳ ಪ್ರಕಾರ, ದುಷ್ಕರ್ಮಿಗಳು ಗುಂಪು ಅರ್ಚಕರ ಮೇಲೆ ದಾಳಿ ಮಾಡಿದ್ದಲ್ಲದೇ, ಮನೆಯ ಹೊರಗೆ ನಿಂತಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಪಕ್ಕದಲ್ಲಿದ್ದವರು ಮತ್ತು ಸ್ಥಳೀಯರು ಅರ್ಚಕರನ್ನು ರಕ್ಷಿಸಲು ಮುಂದಾದಾಗ ದಾಳಿಕೋರರು ಪರಾರಿಯಾಗಿದ್ದಾರೆ.
ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.