ಚಾಮರಾಜನಗರ:ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಮಾದಪ್ಪ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಅರ್ಚಕರು ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.
40 ವರ್ಷದ ನಾಗಣ್ಣ.ಅವರು ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸಿಸುತ್ತಿದ್ದರು. ಉಪ ಅರ್ಚಕರಾದ ನಾಗಣ್ಣ ಅವರಿಗೆ ಈ ತಿಂಗಳು ಮಲೆ ಮಹದೇಶ್ವರ ದೇಗುಲದಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿತ್ತು. ಇವರು ಎಂದಿನಂತೆ ಇಂದು ಬೆಳಗ್ಗೆಯೂ ಮಾದಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಮಧ್ಯವೇ ಸಾವನ್ನಪ್ಪಿದ್ದಾರೆ.