ಹಾಸನ: ದೋಷ ನಿವಾರಣೆ ಮಾಡುವುದಾಗಿ ಕರೆಸಿಕೊಂಡಂತ ಪೂಜಾರಿಯೊಬ್ಬ, ಆ ಮಹಿಳೆಯ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ದಾಖಲಾಗಿದ್ದಂತ ದೂರಿನ ಅನ್ವಯ ಪೊಲೀಸರು ಪೂಜಾರಿಯನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಮಹಿಳೆಯೊಬ್ಬರು ಪುರದಮ್ಮ ದೇಗುಲಕ್ಕೆ ತೆರಳಿದ್ದಂತ ವೇಳೆಯಲ್ಲಿ ದೋಷ ಇದೆ. ಪೂಜೆ ಮಾಡಬೇಕು ಅಂತ ಸೂಚಿಸಿದ್ದರು.
ಪೂಜಾರಿಯ ಮಾತು ನಂಬಿ ದೇವಸ್ಥಾನಕ್ಕೆ ತೆರಳಿದ್ದಂತ ವೇಳೆಯಲ್ಲಿ ಪೂಜೆ ಮಾಡೋದಕ್ಕೆ ಹಣ ಪಡೆದಿದ್ದು ಅಲ್ಲದೇ, ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾಗಿ, ಸಂತ್ರಸ್ತ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರು ದಾಖಲಿಸಿಕೊಂಡ ಬಾಗಲಗುಂಟೆ ಠಾಣೆಯ ಪೊಲೀಸರು, ದೋಷ ನಿವಾರಣೆಗಾಗಿ ಕರೆಸಿಕೊಂಡು ಅತ್ಯಾಚಾರವೆಸಗಿದಂತ ಪುದಮ್ಮ ದೇಗುಲದ ಪೂಜಾರಿ ದಯಾನಂದ್ ಎಂಬಾತನ್ನು ಬಂಧಿಸಿದ್ದಾರೆ.
BREAKING: ‘ಮನೆ ಊಟ’ಕ್ಕೆ ಅವಕಾಶ ಕೊಡಿ: ‘ನಟ ದರ್ಶನ್’ ಜೈಲು ಅಧಿಕಾರಿಗಳಿಗೆ ಪತ್ರದಲ್ಲಿ ಮನವಿ | Actor Darshan
BREAKING: ಕ್ರೌಡ್ ಸ್ಟ್ರೈಕ್ ನಂತ್ರ ‘ಮೈಕ್ರೋಸಾಫ್ಟ್ 365’ ಸೇವೆ ಸ್ಥಗಿತ: ಬಳಕೆದಾರರು ಪರದಾಟ | Microsoft 365