Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM

​’ಭಾರತದ ಪರಮಾಣು ಪಯಣದ ಐತಿಹಾಸಿಕ ಘಟ್ಟ’: ಕಲ್ಪಾಕ್ಕಂ ರಿಯಾಕ್ಟರ್ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ!

07/04/2026 8:14 AM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಉದ್ಯಮಗಳ ನೆರವಿಗೆ ₹2.5 ಲಕ್ಷ ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಿಸಲು ಕೇಂದ್ರ ಸಿದ್ಧತೆ

07/04/2026 8:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !
KARNATAKA

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

By kannadanewsnow5706/03/2026 6:38 AM

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘವು ಶಾಲಾ ಪಠ್ಯಪುಸ್ತಕಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳ ಪಠ್ಯಪುಸ್ತಕಗಳ ದರದಲ್ಲಿ ಗರಿಷ್ಠ ಶೇಕಡ 50ರವರೆಗೆ ಏರಿಕೆಯಾಗಿದ್ದು, ಇದು ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಆತಂಕಕ್ಕೆ ಕಾರಣವಾಗಿದೆ.

ಶಾಲಾ ಶಿಕ್ಷಣ ಇಲಾಖೆಯು ಇತ್ತೀಚೆಗೆ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳಿಗೆ ಬೇಡಿಕೆ (Indent) ಸಲ್ಲಿಸುವಂತೆ ಸೂಚನೆ ನೀಡಿತ್ತು. ಇಲಾಖೆ ಕಳುಹಿಸಿದ ಈ ಸೂಚನಾ ಪತ್ರದಲ್ಲಿ ನಮೂದಿಸಲಾದ ನೂತನ ದರಪಟ್ಟಿಯಲ್ಲಿ ಬೆಲೆ ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ.

ಯಾವ ಪುಸ್ತಕಗಳಿಗೆ ಎಷ್ಟು ಬೆಲೆ ಏರಿಕೆ?

ಹೊಸ ದರಪಟ್ಟಿಯ ಪ್ರಕಾರ ಪ್ರಾಥಮಿಕ ತರಗತಿಗಳ ಪುಸ್ತಕಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಪ್ರಮುಖ ಬದಲಾವಣೆಗಳು ಹೀಗಿವೆ:

3ನೇ ತರಗತಿ ಪರಿಸರ ಅಧ್ಯಯನ: ರೂ. 22 ರಿಂದ ರೂ. 45ಕ್ಕೆ ಹೆಚ್ಚಳ.

2ನೇ ತರಗತಿ ಗಣಿತ (ಇಂಗ್ಲಿಷ್ ಮಾಧ್ಯಮ, ಭಾಗ-2): ರೂ. 25 ರಿಂದ ರೂ. 51ಕ್ಕೆ ಹೆಚ್ಚಳ.

1ನೇ ತರಗತಿ ಮೃದಂಗ ಪುಸ್ತಕ: ರೂ. 42 ರಿಂದ ರೂ. 60ಕ್ಕೆ ಏರಿಕೆ.

4ನೇ ತರಗತಿಯ ಪುಸ್ತಕ: ರೂ. 31 ರಿಂದ ರೂ. 51ಕ್ಕೆ ಏರಿಕೆ.

ಸಂಗೀತ ವಿಷಯಗಳು: 1ರಿಂದ 5ನೇ ತರಗತಿಯ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ವಿಷಯಗಳ ಪಠ್ಯಪುಸ್ತಕಗಳ ದರವನ್ನು ಎಲ್ಲಾ ಹಂತಗಳಲ್ಲೂ ಹೆಚ್ಚಳ ಮಾಡಲಾಗಿದೆ.

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಆಕ್ಷೇಪ

ಪಠ್ಯಪುಸ್ತಕಗಳ ದಿಢೀರ್ ದರ ಹೆಚ್ಚಳಕ್ಕೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ಸರ್ಕಾರವು ಹೊಸ ದರಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಬೇಕಿತ್ತು. ಶೈಕ್ಷಣಿಕ ವರ್ಷದ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಪರಿಸ್ಥಿತಿಯಲ್ಲಿ ಶಾಲೆಗಳಿಲ್ಲ. ಹೀಗಾಗಿ ತಕ್ಷಣವೇ ಬೆಲೆ ಏರಿಕೆಯನ್ನು ತಡೆಯಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Price of school textbooks in the state has increased by 50%: Parents and students are shocked!
Share. Facebook Twitter LinkedIn WhatsApp Email

Related Posts

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM1 Min Read

ಮಕ್ಕಳ ಬೇಸಿಗೆ ರಜೆಯಲ್ಲಿ ಮೋಜಿನ ಜೊತೆಗೆ ಓದಿನ ನಂಟಿರಲಿ: ಪೋಷಕರಿಗಾಗಿ ಇಲ್ಲಿವೆ ಉಪಯುಕ್ತ ಟಿಪ್ಸ್!

07/04/2026 8:00 AM1 Min Read

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ‘ಡಿಜಿಲಾಕರ್’ನಲ್ಲೂ ಫಲಿತಾಂಶ ನೋಡಬಹುದು.!

07/04/2026 7:55 AM1 Min Read
Recent News

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM

​’ಭಾರತದ ಪರಮಾಣು ಪಯಣದ ಐತಿಹಾಸಿಕ ಘಟ್ಟ’: ಕಲ್ಪಾಕ್ಕಂ ರಿಯಾಕ್ಟರ್ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ!

07/04/2026 8:14 AM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಉದ್ಯಮಗಳ ನೆರವಿಗೆ ₹2.5 ಲಕ್ಷ ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಿಸಲು ಕೇಂದ್ರ ಸಿದ್ಧತೆ

07/04/2026 8:11 AM

ಸನ್ಯಾಸ ದೀಕ್ಷೆ ಬಿಟ್ಟು ಸಂಸಾರಕ್ಕೆ ಕಾಲಿಟ್ಟ ‘ಐಐಟಿ ಬಾಬಾ’: ಕುಂಭಮೇಳದ ಪ್ರಸಿದ್ಧ ಸ್ವಾಮೀಜಿ ಕೈಹಿಡಿದ ಕರ್ನಾಟಕದ ಬೆಡಗಿ!

07/04/2026 8:00 AM
State News
BUSINESS

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

By kannadanewsnow5707/04/2026 8:15 AM BUSINESS 1 Min Read

ನವದೆಹಲಿ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗದೆ, ಸ್ವಾವಲಂಬಿಗಳಾಗಲು ಬಯಸುತ್ತಿದ್ದಾರೆ. 2026ರಲ್ಲಿ ಮಹಿಳೆಯರು ಮನೆಯಲ್ಲೇ ಇದ್ದುಕೊಂಡು ಆರಂಭಿಸಬಹುದಾದ ಕೆಲವು…

ಮಕ್ಕಳ ಬೇಸಿಗೆ ರಜೆಯಲ್ಲಿ ಮೋಜಿನ ಜೊತೆಗೆ ಓದಿನ ನಂಟಿರಲಿ: ಪೋಷಕರಿಗಾಗಿ ಇಲ್ಲಿವೆ ಉಪಯುಕ್ತ ಟಿಪ್ಸ್!

07/04/2026 8:00 AM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ‘ಡಿಜಿಲಾಕರ್’ನಲ್ಲೂ ಫಲಿತಾಂಶ ನೋಡಬಹುದು.!

07/04/2026 7:55 AM

ಭಾರತದ ಮೊಬೈಲ್ ಸಂಖ್ಯೆಗಳ ಮುಂದೆ ‘+91’ ಏಕೆ ಇರುತ್ತದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ

07/04/2026 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.