ದೆಹಲಿ: ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು(Droupadi Murmu) ಅವರು ಬೆಳಗ್ಗೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
#WATCH | President-elect #DroupadiMurmu pays tribute at Rajghat in Delhi. She will take oath as the 15th President of the country today.
(Video Source: Rashtrapati Bhavan Twitter account) pic.twitter.com/pen5zhVHwR
— ANI (@ANI) July 25, 2022
President-elect #DroupadiMurmu pays tribute at Rajghat in Delhi.
(Pics Source: Sansad TV) pic.twitter.com/5us9KIUBL7
— ANI (@ANI) July 25, 2022
ಇಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸೆಂಟ್ರಲ್ ಹಾಲ್ಗೆ ಕರೆದೊಯ್ಯಲಿದ್ದಾರೆ. ದ್ರೌಪದಿ ಮುರ್ಮು ಅಲ್ಲಿಗೆ ಬಂದ ನಂತರ, ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಈ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Rare Pics: ಸೂರ್ಯನ ಸುತ್ತ ಮೂಡಿ ಬಂದ ಕಾಮನಬಿಲ್ಲಿನ ವೃತ್ತ… ನೋಡಿ ಇಲ್ಲಿವೆ ಅದ್ಭುತ ಚಿತ್ರಗಳು!