ನವದೆಹಲಿ: ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಡಿಸೆಂಬರ್ 26, 2024) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸಾಧಾರಣ ಹಾಗೂ ವಿಶೇಷ ಸಾಧನೆಗಳಿಗಾಗಿ ಏಳು ವಿಭಾಗಗಳಲ್ಲಿ ಒಟ್ಟು 17 ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ, ಎಲ್ಲಾ ಪ್ರಶಸ್ತಿ ವಿಜೇತರನ್ನು ರಾಷ್ಟ್ರಪತಿಯವರು ಅಭಿನಂದಿಸಿದರು ಮತ್ತು ಸಾಧಕ ಮಕ್ಕಳ ಕುರಿತಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ “ಇಡೀ ದೇಶ ಮತ್ತು ಸಮಾಜವು ಇವರ ಬಗ್ಗೆ ಹೆಮ್ಮೆಪಡುತ್ತದೆ, ದೇಶದ ಇತರ ಬಾಲಕರುಗಳಿಗೆ ಇವರು ಮಾದರಿಯಾಗಿದ್ದಾರೆ. ಇವರು ಅಸಾಧಾರಣ ಕೆಲಸವನ್ನು ಮಾಡಿದ್ದಾರೆ, ಅದ್ಭುತ ಸಾಧನೆಗಳನ್ನು ಸಾಧಿಸಿದ್ದಾರೆ, ಅಪಾರ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಅತುಲ್ಯ ಗುಣಗಳನ್ನು ಹೊಂದಿದ್ದಾರೆ” ಎಂದು ಹೇಳಿದರು.
“ಮಕ್ಕಳ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿಕೊಡುವುದು ನಮ್ಮ ಪರಂಪರೆಯಲ್ಲಿಯೇ ಬಂದಿದೆ. ಈ ಸಂಪ್ರದಾಯವನ್ನು ಮತ್ತಷ್ಟು ಬಲಪಡಿಸಬೇಕು. 2047ರಲ್ಲಿ ನಾವು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತೇವೆ. ಈ ಪ್ರಶಸ್ತಿ ವಿಜೇತರು ಆ ಕಾಲಘಟ್ಟದಲ್ಲಿ ದೇಶದ ಪ್ರಬುದ್ಧ ನಾಗರಿಕರಾಗುತ್ತಾರೆ. ಅಂತಹ ಪ್ರತಿಭಾವಂತ ಹುಡುಗ ಹುಡುಗಿಯರು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾತೃಗಳಾಗುತ್ತಾರೆ” ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.
ಬಳ್ಳಾರಿ: ಡಿ.28ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut