ಬೆಳಗಾವಿ : ಇಂದು ವಿಧಾನಸಭೆಯಲ್ಲಿ ರಾಜ್ಯದ ಆರು ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯ ಸ್ಥಾನಮಾನ ನೀಡುವ ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆಯಾಗಿದೆ.
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವಿಶ್ವವಿದ್ಯಾಲಯಗಳ ವಿಧೇಯಕ ಮಂಡಿಸಿದರು.ಟಿ ಜಾನ್ ವಿಶ್ವವಿದ್ಯಾಲಯ (ಬೆಂಗಳೂರು), ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ (ಬೆಂಗಳೂರು), ಸಪ್ತಗಿರಿ ವಿಶ್ವವಿದ್ಯಾಲಯ (ಬೆಂಗಳೂರು), ಆಚಾರ್ಯ ವಿಶ್ವವಿದ್ಯಾಲಯ (ಬೆಂಗಳೂರು), GM ವಿಶ್ವವಿದ್ಯಾಲಯ (ದಾವಣಗೆರೆ) ಮತ್ತು ಕಿಷ್ಕಿಂದಾ ವಿಶ್ವವಿದ್ಯಾಲಯ (ಬಳ್ಳಾರಿ) ಸೇರಿ ಒಟ್ಟು ಆರು ವಿವಿಗಳ ವಿಧೇಯಕ ಮಂಡನೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿರುವ ಖಾಸಗಿ ವಿಶ್ವವಿದ್ಯಾನಿಲಯಗಳು ಪ್ರಸ್ತುತ 23 ರಿಂದ 29 ಆಗಲಿದೆ.
ರಾಜ್ಯ ಸರ್ಕಾರವು ಆರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ಥಾನಮಾನ ನೀಡುತ್ತಿದ್ದು, ಇಂದು ವಿಧಾನಸಭೆಯಲ್ಲಿ ರಾಜ್ಯದ ಆರು ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯ ಸ್ಥಾನಮಾನ ನೀಡುವ ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆಯಾಗಿದೆ. ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಿದೆ.
BIGG NEWS : ರಾಜ್ಯದ ಕೈದಿಗಳ ವೇತನ 650 ರೂ.ಗೆ ಹೆಚ್ಚಳ : ಗೃಹ ಸಚಿವ ಆರಗ ಜ್ಞಾನೇಂದ್ರ