ವಿಜಯಪುರ : ವಿಜಯಪುರ ನಗರ ಸೇರಿದಂತೆ ಹಲವಡೆ ಇಂದು ಅಕಾಲಿಕ ಮಳೆ ಆಯಿತು. ಕಳೆದ ಅರ್ಧ ಗಂಟೆಯಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲೂ ಸ್ಥಗಿತವಾಗಿದೆ.
ಒಂದು ಕಡೆ ಮಳೆಯಲ್ಲಿಯೇ ದ್ವಿಚಕ್ರ ವಾಹನ ಓಡಿಸಿ ಸವಾರರು ಖುಷಿ ಪಟ್ಟರು. ಆದರೆ ಮತ್ತೊಂದು ಕಡೆ ದ್ರಾಕ್ಷಿ ಬೆಳೆಗಾರರಲ್ಲಿ ಈ ಒಂದು ಅಕಾಲಿಕ ಮಳೆ ಆತಂಕ ಮೂಡಿಸಿದೆ. ಬಿರುಸಾದ ಮಳೆಯಿಂದ ದ್ರಾಕ್ಷಿ ಬೆಳೆ ಹಾಳಾಗುವ ಸಾಧ್ಯತೆ ಇದೆ. ಕಠಾವಿಗೆ ಬಂದಿದ್ದ ಹಿಂಗಾರು ಬೆಳೆ ಹಾನಿಯಾಗುವ ಆತಂಕ ಇದೆ.








