ಶಿವಮೊಗ್ಗ: ಜಿಲ್ಲೆ ಸಾಗರದ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಅವರ ಪುತ್ರಿ ಪ್ರೇಕ್ಷಾ ಎಲ್ ಗೌಡ ಅವರು ವಿವಿಧ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ನಡೆದಂತ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಡಬಿದ್ರಿಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿ ಓದುತ್ತಿರುವಂತ ಪ್ರೇಕ್ಷಾ ಎಲ್ ಗೌಡ ಅವರು, ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷಾ ಎಲ್ ಗೌಡ ಪ್ರತಿನಿಧಿಸಿದ್ದರು. ಇಂತಹ ಇವರು 80 ಮೀಟರ್ ಹರ್ಡಾಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಅಲ್ಲದೇ 4×100 ಮೀಟರ್ ರಿಲೇಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಂದಹಾಗೇ ಮೂಡಬಿದರಿಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವಂತ ಪ್ರೇಕ್ಷಾ ಎಲ್ ಗೌಡ ಅವರು ಸಾಗರ ಪೇಟೆ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಲೋಕೇಶ್ ಹಾಗೂ ಛಾಯಾ ದಂಪತಿಗಳ ಪುತ್ರಿಯಾಗಿದ್ದಾರೆ.
ಸಾಗರ ಪೇಟೆ ಠಾಣೆಯ ಕಾನ್ ಸ್ಟೇಬಲ್ ಲೋಕೇಶ್ ಪುತ್ರಿಯ ಸಾಧನೆಯನ್ನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶ್ಲಾಘಿಸಿದ್ದಾರೆ. ಅಲ್ಲದೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಗೆಲುವು ಸಾಧಿಸಿ, ಶಾಲೆಗೆ, ಪೋಷಕರಿಗೆ ಕೀರ್ತಿ ತರಲಿ ಎಂಬುದಾಗಿ ಹಾರೈಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
‘ಕರಿಯಣ್ಣ’ ಹೇಳಿಕೆ ವಿರುದ್ಧ ಸಿಡಿದೆದ್ದ ‘ರಾಜ್ಯ ಒಕ್ಕಲಿಗರ ಸಂಘ’: ‘ಜಮೀರ್’ ಸಂಪುಟದಿಂದ ಕೈಬಿಡುವಂತೆ ‘ಸಿಎಂಗೆ ಪತ್ರ’
SHOCKING NEWS: ಭಾರತದಲ್ಲಿ ಮಾರಾಟವಾಗುವ ‘ಅರಿಶಿನ’ದಲ್ಲಿ ವಿಷಕಾರಿ ಮಟ್ಟದ ಸೀಸ ಪತ್ತೆ: ಅಧ್ಯಯನ | Turmeric
BIG NEWS : ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 1 ತಿಂಗಳಲ್ಲಿ 140 ಕೆಜಿ ಗಾಂಜಾ ಜಪ್ತಿ, 64 ಜನ ಅರೆಸ್ಟ್!