ಮೈಸೂರು : ಮುಡಾ ಬಹುಕೋಟಿ ಹಗರಣ ಆರೋಪ ಪ್ರತ್ಯಾರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಕೆ. ಮರಿಗೌಡ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಹಿನ್ನೆಲೆ ಕೆ. ಮರಿಗೌಡ ಕಿಡಿಕಾರಿದ್ದು, ಮಾಧ್ಯಮ ಪ್ರಕಟಣೆಯ ಮೂಲಕ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೀಳು ಮಟ್ಟದ ರಾಜಕಾರಣದಿಂದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ತಪ್ಪಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ನಡವಳಿಕೆಯಿಂದಲೇ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ತಪ್ಪಿದೆ. ಸಿಎಂ ಸಿದ್ದರಾಮಯ್ಯ ನ್ಯಾಯಯುತವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅವರು ಯಾಕೆ ನಿವೇಶನ ವಾಪಸ್ ನೀಡಬೇಕು? ಎಂದು ಕಿಡಿ ಕಾರಿದರು.
ಪ್ರತಾಪ್ ಸಿಂಹ ಎಲ್ಲರನ್ನು ಏಕವಚನದಲ್ಲಿ ನಿಂದಿಸುತ್ತ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಏಳಿಗೆಯನ್ನು ಪ್ರತಾಪ್ ಸಿಂಹ ಸಹಿಸುತ್ತಿಲ್ಲ. ಅವಾಗವಾಗ ಸಿದ್ದರಾಮಯ್ಯರನ್ನು ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಮುಡಾ ವಿಚಾರದಲ್ಲಿ ಪ್ರತಾಪ್ ಸಿಂಹ ವಾಮ ಮಾರ್ಗ ಅನುಸರಿಸಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರಿಗೌಡರಿಂದ ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.