ಬೆಳಗಾವಿ: ರಾಜ್ಯ ಸರ್ಕಾರ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ನಿಷೇಧ ಹೇರಿತ್ತು. ಸರ್ಕಾರ ಈ ನಿರ್ಧಾರದ ವಿರುದ್ಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಅಲ್ಲದೇ ಡಿಜೆ ಹಾಕಿಯೇ ಗಣೇಶೋತ್ಸವ ಆಚರಿಸುವಂತೆ ಯುವಕ ಮಂಡಳಿಗೆ ಕರೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ವರ್ಷಕ್ಕೊಮ್ಮೆ ಬರುವಂತ ಗಣೇಶ ಹಬ್ಬದ ವೇಳೆಯಲ್ಲಿ ಡಿಜೆ ಮೂಲಕ ಆಚರಿಸುತ್ತೇವೆ. ಆದರೇ ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಡಿಜೆ ಹಾಕದಂತೆ ತೊಂದರೆ ಕೊಡುತ್ತಿದೆ ಎಂಬುದಾಗಿ ಕಿಡಿಕಾರಿದರು.
ತುಮಕೂರು ಜಿಲ್ಲೆಯ ಹಿಂದೂ ಸಂಘಟನೆಗಳಿಗೆ ಸರ್ಕಾರ ಡಿಜೆ ಹಾಕದಂತೆ ತೊಂದರೆ ಕೊಡುತ್ತಿದೆ. ಅದರೇ ಪೊಲೀಸರಿಗೆ ನಾವು ಬಗ್ಗುವುದಿಲ್ಲ. ಅದೇನೇ ಆಗಲಿ ಡಿಜೆ ಹಾಕಿಯೇ ಗಣೇಶೋತ್ಸವ ಆಚರಿಸುತ್ತೇವೆ. ಯುವಕ ಮಂಡಳಿಗಳು ಡಿಜೆ ಹಾಕೇ ಗಣೇಶ ಹಬ್ಬ ಮಾಡಿ ಎಂಬುದಾಗಿ ಕರೆ ನೀಡಿದರು.
ಡಿಜೆ ಹಾಕುವಂತಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶ ಅಂತ ಹೇಳುತ್ತಾರೆ. ಅದೇ ಮಸೀದಿಗಳಲ್ಲಿ ಮೈಕ್ ಗಳಲ್ಲಿ ಆಜಾನ್ ಕೂಗುತ್ತಾರಲ್ವ ಅದಕ್ಕೆ ಸುಪ್ರೀಂ ಕೋರ್ಟ್ ಆದೇಶ ಅನ್ವಯಿಸೋದಿಲ್ವ? ಈ ಬಗ್ಗೆ ಪೊಲೀಸರು ಮಾತನಾಡದೇ ಡಿಜೆ ಬಗ್ಗೆ ಮಾತನಾಡುವುದು ಏಕೆ ಎಂಬುದಾಗಿ ಕೆಂಡಾಮಂಡಲವಾದರು.
ಹಿಂದೂಗಳು ಮೃದು ಸ್ವಭಾವದವರು ಅಂತ ಹಿಂದೂಗಳ ಆಚರಣೆಗೆ ತೊಂದ್ರೆ ಕೊಡ್ತಾ ಇದ್ದೀರಾ.? ಈ ತಾರತಮ್ಯ ನೀತಿ ಸರಿಯಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಚಾಚು ತಪ್ಪದೇ ತರುವುದಾದರೇ, ಮಸೀದಿಗಳಲ್ಲಿನ ಮೈಕ್ ಕೂಡ ತೆಗೆಸಿ ಹಾಕಿ ಎಂಬುದಾಗಿ ಸವಾಲೆಸೆದರು.
ಮಹದಾಯಿ ಯೋಜನೆ ಹಿನ್ನಡೆಗೆ ‘ಕಾಂಗ್ರೆಸ್’ನವರೇ ಕಾರಣ: ಸಂಸದ ಬಸವರಾಜ ಬೊಮ್ಮಾಯಿ
ALERT : ಅತಿಯಾಗಿ ಮೊಬೈಲ್ ಬಳಸುವವರೇ ಎಚ್ಚರ : ಈ ಅಪಾಯಕಾರಿ ರೋಗ ನಿಮ್ಮನ್ನು ಕಾಡಬಹುದು!