ನವದೆಹಲಿ: ಲೋಕಸಭಾ ಚುನಾವಣೆಗೆ ಮುನ್ನವೇ ನಟ ಪ್ರಕಾಶ್ ರಾಜ್ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಆ ಮೂಲಕ ಬಿಜೆಪಿಯ ಜೊತೆ ಸೇರಿ ಚುನಾವಣಾ ಪ್ರಚಾರ ಕೂಡ ನಡೆಸಲಿದ್ದಾರೆ ಎಂಬುದಾಗಿ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಗ್ಗೆ ನಟ ಪ್ರಕಾಶ್ ರಾಜ್ ಏನು ಹೇಳಿದ್ರು ಅಂತ ಮುಂದೆ ಓದಿ.
ಎಕ್ಸ್ ನಲ್ಲಿ ದಿ ಸ್ಕಿನ್ ಡಾಕ್ಟರ್ ಎಂಬುವರು ನಟ ಪ್ರಕಾಶ್ ರಾಜ್ ಅವರು ಬಿಜೆಪಿ ಪಕ್ಷವನ್ನು ಇಂದು ಸೇರ್ಪಡೆಗೊಳ್ಳಲಿದ್ದಾರೆ ಎಂಬುದಾಗಿ ಪೋಸ್ಟ್ ಹಾಕಿದ್ದರು.
ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿರುವಂತ ನಟ ಪ್ರಕಾಶ್ ರಾಜ್ ಬಿಜೆಪಿ ಪಕ್ಷವನ್ನು ಸೇರುತ್ತಾರೆ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವಂತ ನಟ ಪ್ರಕಾಶ್ ರಾಜ್, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ನಾನು ಇದನ್ನು ಊಹಿಸಿದ್ದೆ. ಅವರು ನನ್ನನ್ನು ಸೈದಾಂತಿಕವಾಗಿ ಖರೀದಿಸುವಷ್ಟು ಶ್ರೀಮಂತರಾಗಿಲ್ಲ. ನಾನು ಬಿಜೆಪಿ ಸೇರೋದು ಇಲ್ಲ. ಸ್ನೇಹಿತರೇ ಜಸ್ಟ್ ಆಸ್ಕಿಂಗ್ ಅಂತ ಸ್ಪಷ್ಟ ಪಡಿಸಿದ್ದಾರೆ.
I guess they tried 😂😂😂 must have realised they were not rich enough (ideologically) to buy me.. 😝😝😝.. what do you think friends #justasking pic.twitter.com/CCwz5J6pOU
— Prakash Raj (@prakashraaj) April 4, 2024
‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಭಾರತದಲ್ಲೇ ಸಿಗಲಿದೆ ‘CAR T-Cell ಥೆರಪಿ ಚಿಕಿತ್ಸೆ’
ಗಾಯಕ್ಕೆ ‘ಬ್ಯಾಂಡೇಜ್’ ಬಳಸುತ್ತೀರಾ.? ಇದು ‘ಕ್ಯಾನ್ಸರ್’ಗೆ ಕಾರಣವಾಗ್ಬೋದು ಎಚ್ಚರ ; ಅಧ್ಯಯನ