ಹಾಸನ : ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಹಾಗೂ ಅವರ ಮಗ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊರ್ವಳು ಲೈಂಗಿಕ ಕಿರುಕುಳ ನೀಡಿರುವ ಆರೋಪದ ದೂರಿನ ಅನ್ವಯ ಇಂದು ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಇರುವ ಶಾಸಕ ಎಚ್ ಡಿ ರೇವಣ್ಣ ಮನೆಯಲ್ಲಿ ತಂಡ ಮಹಿಳೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದೆ.
ಇಂದು ಹಾಸನದ ಹೊಳೆನರಸೀಪುರಕ್ಕೆ ಎಸ್ಐಟಿ ತಂಡ ಭೇಟಿ ನೀಡಲಿದ್ದು, ದೂರು ನೀಡಿದ ಮಹಿಳೆಯ ಸಮ್ಮುಖದಲ್ಲಿ ಎಸ್ಐಟಿ ತಂಡ ಸ್ಥಳ ಮಹಜರು ನಡೆಸಲಿದೆ. ಮಹಿಳೆ ಕೆಲಸ ಮಾಡುವಾಗ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಳು.
ಹೆಚ್ಡಿ ರೇವಣ್ಣ ವಿರುದ್ಧ ಕೆಲಸ ಮಾಡುವ ಮಹಿಳೆಯಿಂದ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲಯಲ್ಲಿ ಹೊಳೆನರಸೀಪುರ ನಗರ ಠಾಣೆಯ ಪೊಲೀಸರು FIR ದಾಖಲಿಸಿಕೊಂಡಿದ್ದರು. A1 ಆರೋಪಿ ಶಾಸಕ ಎಸ್ ಡಿ ರೇವಣ್ಣ ಮತ್ತು A2 ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ದಾಖಲಾಗಿತ್ತು. ಹೀಗಾಗಿ ಇಂದು ಮಹಿಳೆಯ ಸಮ್ಮುಖದಲ್ಲಿ ಎಸ್ಐಟಿ ಸ್ಥಳ ಮಹಜರು ನಡೆಸಲಿದೆ ಎಂದು ತಿಳಿದುಬಂದಿದೆ.