ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಪೆನ್ ಡ್ರೈವ್ ಗೆ ಕಾಪಿ ಮಾಡಿ, ಹಂಚಿಕೆ ಮಾಡಿರೋ ಆರೋಪ ಸಂಬಂಧ ಈಗಾಗಲೇ ಕೆಲ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಪೆನ್ ಡ್ರೈವ್ ಕೇಸ್ ತನಿಖೆ ಚುರುಕುಗೊಳಿಸಿ 18 ಕಡೆ ಹಾಸನದಲ್ಲಿ ದಾಳಿ ನಡೆಸಿದ್ದರು.
ಈ ದಾಳಿಯ ವೇಳೆಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಹಂಚಿಕೆ ಸಂಬಂಧ ಎಸ್‌ಐಟಿ ಅಧಿಕಾರಿಗಳಿಂದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹಾಸನದಲ್ಲಿ ಈ ಕೇಸ್ ಸಂಬಂಧ 18 ಕಡೆ ದಾಳಿಯನ್ನು ನಡೆಸಲಾಗಿತ್ತು. ಈ ದಾಳಿಯ ವೇಳೆಯಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ.
ಹಾಸನ ಪೆನ್ ಡ್ರೈವ್ ಕೇಸ್ ಸಂಬಂಧ ಎಸ್‌ಐಟಿ ಅಧಿಕಾರಿಗಳು ನಡೆಸಿದಂತ 18 ಕಡೆಯ ದಾಳಿಯಲ್ಲಿ 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್ ವಶ ಪಡಿಸಿಕೊಂಡಿದೆ ಎನ್ನಲಾಗುತ್ತಿದೆ.
7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, 4 ಲ್ಯಾಪ್ ಟಾಪ್, 3 ಡೆಸ್ಕ್ ಟಾಪ್ ಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವುಗಳಿಂದ ಯಾರೆಲ್ಲ ಅಶ್ಲೀಲ ವೀಡಿಯೋಗಳನ್ನು ಕಾಪಿ ಮಾಡಿಕೊಂಡು ಹಂಚಿಕೆ ಮಾಡಿದ್ದಾರೆ ಎನ್ನುವ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನೂ ಎಸ್‌ಐಟಿಗೆ 18 ಕಡೆ ನಡೆಸಿದಂತ ದಾಳಿಯಲ್ಲಿ ಸಿಕ್ಕಿರುವಂತ ಲ್ಯಾಪ್ ಟಾಪ್, ಡೆಸ್ ಸ್ಟಾಪ್, ಹಾರ್ಡ್ ಡಿಸ್ಕ್ ಗಳನ್ನು ಎಫ್‌ಎಸ್‌ಎಲ್ ತನಿಖೆಗೂ ಕಳುಹಿಸಿಕೊಟ್ಟಿದ್ದು, ಪೆನ್ ಡ್ರೈವ್ ಹಂಚಿಕೆ ತನಿಖೆ ಚುರುಕು ಪಡೆದಂತೆ ಆಗಿದೆ.