ಬೆಂಗಳೂರು: ಏರ್‌ಪೋರ್ಟ್‌ನಲ್ಲೇ ಪ್ರಜ್ವಲ್ ರೇವಣ್ಣ ಬಂಧನ ಮಾಡಲಾಗುವುದು ಅಂಥ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಎಲ್ಲಾ ರೀತಿಯಲ್ಲಿ ಕಾನೂನು ಪ್ರಕಾರ ನಡೆಸಲಾಗಿದೆ ಅಂಥ ತಿಳಿಸಿದ ಅವರು ಬಂಧನಕ್ಕೆ ಸಂಬಂಧಪಟ್ಟಂಥೆ ಹಲವು ಅಡ್ಡಿಗಳಿದ್ದು, ಅವುಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗಿದೆ ಅಂಥ ಹೇಳಿದರು. ಇನ್ನೂ ಪಾಸ್‌ಪೋರ್ಟ್ ರದ್ದು ಮಾಡುವುದಕ್ಕೆ ಸಂಬಂಧಪಟ್ಟಂಥೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಕೂಡ ಸೂಕ್ತ ಕ್ರಮಕೈಗೊಳ್ಳಲಾಗುವುದು ಅಂಥ ಹೇಳಿದರು.