ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶೀಲಾ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಿದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆ ಮರೆತಿದ್ದೇವೆ ಅನಿಸುತ್ತದೆ. ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಿದು ಎಂದು ಕೆಪಿಸಿಸಿ ಕಚೇರಿಯಲ್ಲಿ ಸಚಿವ ಕೃಷ್ಣಭೈರೇಗೌಡ ಹೇಳಿಕೆ ನೀಡಿದರು. ಇಷ್ಟೊಂದು ಹಿಂದೂ ಮಹಿಳೆಯರ ಮಾಂಗಲ್ಯದೋಚಿರುವ ಇದಕ್ಕಿಂತ ಇನ್ನೊಂದು ದೊಡ್ಡ ಪ್ರಕರಣ ತೋರಿಸಿ ನೋಡೋಣ? ಎಂದರು.
ಮಾನಹರಣ, ಶೀಲಹರಣ, ಮಾಡಿರುವ ಹಗರಣ ಇದು ಯಾರ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು.ಮಾನಹರಣ ಮಾಡಿದ್ದು ಅಪರಾಧವಲ್ಲ ಎಂಬ ಚರ್ಚೆ ಆಗುತ್ತಿದೆ. ಮಾಂಗಲ್ಯದೋಚಿದ್ದು ಯಾರೆಂದು ಚರ್ಚೆ ಆಗಬೇಕಲ್ಲವಾ? ಚರ್ಚೆ ದಿಕ್ಕು ನೋಡಿದರೆ ಪ್ರಕರಣ ಮುಖ್ಯ ಹಾಕುವ ಷಡ್ಯಂತರ ನಡೆಯುತ್ತಿದೆ ಎಂದು ತಿಳಿಸಿದರು.