ಹುಬ್ಬಳ್ಳಿ: ಪ್ರಹ್ಲಾದ್ ಜೋಶಿಯಿಂದ ಸ್ವಾಮೀಜಿಗಳಿಗೆ ಪಾಕೆಟ್ ರಾಜಕೀಯ ಮಾಡುತ್ತಿದ್ದು ಈ ಬಗ್ಗೆ ನನ್ನ ಬಳಿ ವಿಡಿಯೋ ಇದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪೋಟಕ ಮಾಹಿತಿಯನ್ನು ಹೇಳಿದ್ದಾರೆ.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಜೋಶಿ ಸೋಲಿಸೋದೆ ನಮ್ಮ ಗುರಿ. ಮಠಗಳ ನಡುವೆ ಜೋಶಿ ಒಡೆದಾಳೋ ನೀತಿ ಅನುಸರಿಸುತ್ತಿದ್ದಾರೆ. ಜೋಶಿ ಅವಲ ಸೋಲು ಖಚಿತ, ಸರ್ವೆಯಲ್ಲಿ ಇದು ಬಹಿರಂಗವಾಗಿದೆ ಎಂದು ಹೇಳಿದರು.
ಇದಲ್ಲದೇ ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕು. ನನ್ನ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ ಹಾಕಿಸಿದರು. ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ದರಾಮ ಮಹಾಸ್ವಾಮಿಗಳನ್ನ ಪದೆ ಪದೇ ಭೇಟಿ ಮಾಡ್ತಿದ್ದಾರೆ. ನಮ್ಮ ಗುರು ಶಿಷ್ಯರುನ್ನು ಅಗಲಿಸೋ ಕೆಲಸ ಮಾಡ್ತಿದ್ದಾರೆ. ನೀವು ನಮ್ಮ ಗುರು ಶಿಷ್ಯರನ್ನು ಅಗಲಿಸಿದ್ರೆ,ನಾವು ನಿಮ್ಮ ದಂಪತಿ ಅಗಲಿಸುತ್ತೇವೆ ಎಂದು ಹೇಳಿದರು.