ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ( POSCO Case ) ನ್ಯಾಯಾಂಗ ಬಂಧನದಲ್ಲಿರುವಂತ ಮುರುಘಾ ಶ್ರೀಗಳ ( Murugha Sri ) ಲೈಂಗಿಕ ಹಗರಣಗಳು ಒಂದರ ಹಿಂದೆ ಒಂದು ಬಯಲಾಗುತ್ತಿದೆ. ಈಗಾಗಲೇ ನಾಲ್ವರು ವಿದ್ಯಾರ್ಥಿನಿಗಳು ಆರೋಪ ಮಾಡಿದ್ದು, ಮಠದಲ್ಲಿ ಇನ್ನೊಂದಷ್ಟು ಲೈಂಗಿಗ ಹಗರಣಗಳು ಬೆಳಕಿಗೆ ಬರುತ್ತಿದೆ.
ಇದೀಗ ಮುರುಘಾ ಶ್ರೀ ಗಳನ್ನು ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಭಾರೀ ಆಗ್ರಹ ಕೇಳಿಬರುತ್ತಿದೆ. ಕೂಡಲೇ ಸ್ವಾಮೀಜಿಯನ್ನು ಮಠದಿಂದ ವಜಾ ಮಾಡಬೇಕು ಎಂದು ಹಲವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಜಿ ಸಿಎಂ ಯಡಿಯೂರಪ್ಪರನ್ನು ಕೂಡ ಭೇಟಿಯಾಗಿ ಮುರುಘಾ ಶ್ರೀಗಳ ವಜಕ್ಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮುರುಘಾ ಮಠದ ( Murugha Matt ) ಡಾ.ಶಿವಮೂರ್ತಿ ಶಿವಶರಣರು ಪೋಸ್ಕೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಕೂಡ ನಡೆಸಲಾಗಿತ್ತು.
BIGG NEWS: ಶಾಲೆಗಳಿಗೆ ದಸರಾ ರಜೆಯನ್ನು1 ತಿಂಗಳಿಗೆ ವಿಸ್ತರಿಸಿ; ಸರ್ಕಾರಕ್ಕೆ ಬಸವರಾಜ ಹೊರಟ್ಟಿ ಪತ್ರ