ಶಿವಮೊಗ್ಗ: ದಿನಾಂಕ 22-02-2026ರಂದು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂನಿಂದ ಕೈಗೊಳ್ಳುತ್ತಿರುವುದರಿಂದ ಸೊರಬ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸೊರಬ ತಾಲ್ಲೂಕಿನ ಮೆಸ್ಕಾಂ ಎಇಇ ಅವರು, ದಿನಾಂಕ:22.02.2026 ರಂದು ಮವಿಸಕಂ, ಸೊರಬ ವತಿಯಿಂದ ಸೊರಬ ಪಟ್ಟಣದಲ್ಲಿ ಟೌನ್ ಫೀಡರ್‌ನ ಬೇರ್ಪಡಿಸುವ ಕಾಮಗಾರಿ ಹಾಗೂ ಇತರೆ ನಿರ್ವಹಣಾ ಕಾಮಗಾರಿಯನ್ನು ತುರ್ತಾಗಿ ನಡೆಸಲು ಉದ್ದೇಶಿಸಿರುವುದರಿಂದ, 110/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಸೊರಬ ಶಾಖಾ ವ್ಯಾಪ್ತಿಗೆ ಒಳಪಡುವ ಎಫ್ 21 ಸೊರಬ ಪಟ್ಟಣ ಸಂದಂತೆ ಎಫ್ 2 ಸಾಲೇ ಕೊಮ್ಮ, ಎಫ್-3 ಬಳ್ಳಿಬೈಲು, ಎಫ್ 4 ಓಟೂರು ವ್ಯಾಪ್ತಿಯಲ್ಲಿ ಕರೆಂಟ್ ಇರೋದಿಲ್ಲ.
ಇನ್ನೂ ಚಿಕ್ಕಾವಲಿ, ಎಫ್15 ಕಲ್ಲಂಬಿ ಎನ್‌ಜೆ, ಎಫ್-16 ಕಡಸೂರು ಎನ್‌ಜೆ, ಎಫ್-17 ಯಲವಳ್ಳಿ, ಎನ್‌ಜೆವ್ರ, ಎಫ್-9 ಬಿಳಾಗಿ, ಎಫ್-11 ಮಂಚಿ, ಎಫ್-12 ಉರಗನಹಳ್ಳಿ, ಎಫ್-13 ಅಂಡಿಗೆ, ಎಫ್-14 ಕೊಡಕಣಿ, ಎಫ್-23 ತಾವರೆಹಳ್ಳಿ, ಎಫ್ 24 ಶಕ್ಕರಿಸಿ ಎಫ್ ನಡಹಳ್ಳಿ ಮತ್ತು ಎಫ್26 ಸೊರಬ ಇಂಡಸ್ಟ್ರಿಯಲ್ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ತಿಳಿಸಿದೆ.
‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಹೀಗಿದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CLT)ಯ ಹೊಸ ಪಠ್ಯಕ್ರಮ
ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ








