ಬೆಂಗಳೂರು: ನಗರದ ಹೃದಯ ಭಾಗವಾಗಿದ್ದಂತ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಟ್ರಾನ್ಸ್ ಫಾರ್ಮರ್ ಹಾಳಾಗಿದ್ದರಿಂದ ಪವರ್ ಕಟ್ ಆಗಿತ್ತು. ಈಗ ಬೆಸ್ಕಾಂ ಇಲಾಖೆಯಿಂದ ದುರಸ್ಥಿಗೊಳಿಸಲಾಗಿದ್ದು, ಮರಳಿ ಕರೆಂಟ್ ಬಂದಿರುವುದಾಗಿ ಬಿಎಂಟಿಸಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿಯು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿನ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದ್ದರಿಂದಾಗಿ ವಿದ್ಯುತ್ ಸ್ಥಗಿತ ಉಂಟಾಗಿತ್ತು. ಆದರೇ ಜನರೇಟರ್ ಬಳಸಿ ವಿದ್ಯುತ್ ಅನ್ನು ಬಿಎಂಟಿಸಿ ನಿಲ್ದಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿತ್ತು.
ನಿಮ್ಮ ಕನ್ನಡ ನ್ಯೂಸ್ ನೌ ಆ ಬಗ್ಗೆ ಬೆಂಗಳೂರಿನ ‘ಮೆಜೆಸ್ಟಿಕ್’ನಲ್ಲೇ ವಿದ್ಯುತ್ ಕಡಿತ: ಕತ್ತಲಲ್ಲಿ ‘BMTC ಬಸ್ ನಿಲ್ದಾಣ’ದಲ್ಲಿ ಪ್ರಯಾಣಿಕರ ಪರದಾಟ ಎಂಬುದಾಗಿ ವರದಿಯನ್ನು ಪ್ರಕಟಿಸಿತ್ತು. ಈ ಸುದ್ದಿಯ ನಂತ್ರ ಬಿಎಂಟಿಸಿಯಿಂದ ತ್ವರಿತ ಕಾರ್ಯದ ನಂತ್ರ, ಬೆಸ್ಕಾಂ ಇಲಾಖೆಯಿಂದ ಟ್ರಾನ್ಸ್ ಫಾರ್ಮಾರ್ ಬದಲಿಸಿ, ವಿದ್ಯುತ್ ಮರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಪವರ್ ಮತ್ತೆ ಬಂದಂತೆ ಆಗಿದೆ.
ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಹುಣಸಗಿ ರೈಲು ಹೋರಾಟ ಸಮಿತಿ ಮನವಿ
BIG Exclusive: ರಾಜ್ಯದಲ್ಲೊಬ್ಬ ಅಪರೂಪದ ‘ಮುಖ್ಯೋಪಾಧ್ಯಾಯ’: ಇವರ ‘ಶುಚಿತ್ವ ಕಾರ್ಯ’ಕ್ಕೆ ಭಾರೀ ಮೆಚ್ಚುಗೆ