ಬೆಂಗಳೂರು : ಬೆಂಗಳೂರಿನ ಹಲವು ಭಾಗದಲ್ಲಿ ಈ ವಾರಾಂತ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ( ಬೆಸ್ಕಾಂ) ಪ್ರಕಟಣೆ ನೀಡಿದೆ.
ನಗರದ ಹಲವು ಕಡೆ ತುರ್ತು ದುರಸ್ತಿ ಕೆಲಸ, ನಿರ್ವಹಣೆ ಇರುವ ಹಿನ್ನೆಲೆ ನ.6 ರಂದು ವಿದ್ಯುತ್ ವ್ಯತ್ಯಯವಾಗಲಿದೆ.ನವೆಂಬರ್ 6, ಭಾನುವಾರದಂದು ಬೆಸ್ಕಾಂ ವಿಭಾಗಗಳಾದ ಚಿಕ್ಕಬಳ್ಳಾಪುರ ಉಪವಿಭಾಗದ ವ್ಯಾಪ್ತಿಯ ಕನಕಪುರ ಮತ್ತು ಪೆರೇಸಂದ್ರ ಉಪಕೇಂದ್ರಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ( ಬೆಸ್ಕಾಂ) ಪ್ರಕಟಣೆ ನೀಡಿದೆ. ನಗರದಲ್ಲಿನ ಕೆಲವು ಅಪೂರ್ಣ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಮಾಡಲು ಬೆಸ್ಕಾಂ ಮತ್ತು KTPCL (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ವಿದ್ಯುತ್ ಕಡಿತಕ್ಕೆ ನಿರ್ಧರಿಸಿದೆ.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ
BIGG NEWS : ನಿವೃತ್ತ ಪ್ರಾಮಾಣಿಕ ಯೋಧರನ್ನು ಲೋಕಾಯುಕ್ತಕ್ಕೆ ನೇಮಿಸಿಕೊಳ್ಳಲು ಚಿಂತನೆ |Lokayuktha