ಚಿತ್ರದುರ್ಗ : ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ವಾರ್ ತಣ್ಣಗಾದ ಬೆನ್ನಲ್ಲೇ ಇದೀಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿʻ ಪೋಸ್ಟರ್ ಪಾಲಿಟಿಕ್ಸ್ ʼ ಶುರುವಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಿಎಎಫ್ಐ ಪೋಸ್ಟರ್ ಅಂಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಶಾಕ್ ನೀಡಿದೆ. ಚಳ್ಳಕೆರೆ ಪಟ್ಟಣದ ವಿವಿಧೆಡೆ ಈ ಪೋಸ್ಟರ್ ಅಂಟಿಸಲಾಗಿತ್ತು. ಚಳ್ಳಕೆರೆ ಪಟ್ಟಣದ ಹಲವೆಡೆ ಬಿಜೆಪಿ ಕಾರ್ಯಕರ್ತರಿಂದ ʻಪಿಎಫ್ಐ ಭಾಗ್ಯʼ ಪೋಸ್ಟರ್ ಅಂಟಿಸಲಾಗಿದೆ.
ಬಳ್ಳಾರಿ ರಸ್ತೆಯ ಸೇತುವೆ ಬಳಿ ʻ ಪಿಎಫ್ಐ ಭಾಗ್ಯʼ ಪೋಸ್ಟರ್ ಪೋಸ್ಟರ್ನನ್ನು ಅಂಟಿಸಲಾಗಿತ್ತು. ಇದನ್ನು ಕಂಡ ಪೊಲೀಸರು ತಕ್ಷಣ ʻಪಿಎಫ್ಐ ಭಾಗ್ಯʼ ಪೋಸ್ಟರ್ ತೆರವುಗೊಳಿಸಿದ್ದಾರೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ.