ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎಪ್ರಿಲ್ 27 ರಂದು ವಿದೇಶದಲ್ಲಿ ಇದ್ದು ತಲೆಮರಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಇದೀಗ ಎಸ್ಐಟಿ ಹಿರಿಯ ಅಧಿಕಾರಿಗಳು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಆ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರೆಂಟ್ ಜಾರಿ ವಿಚಾರವಾಗಿ ಮಾಹಿತಿ ಹಂಚಿಕೊಂಡ ಅಧಿಕಾರಿಗಳು, ಎಸ್ಐಟಿ ಮನವಿ ಪುರಸ್ಕರಿಸಿ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. ಹಲವು ಸಲ ನೋಟಿಸ್ ನೀಡಿದರು ಕೂಡ ಪ್ರಜ್ವಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಅರೆಸ್ಟ್ ವಾರೆಂಟ್ ಜಾರಿಗೆ ಎಸ್ಐಟಿ ಮನವಿ ಮಾಡಿತ್ತು.ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದು ಇಳಿದರೆ ಮಾತ್ರ ಅರೆಸ್ಟ್ ಮಾಡಬಹುದು ಎಂದು ವಿಶೇಷ ತನಿಖಾ ತಂಡದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಬಂದಿದ್ದೆ ಏಕಾಏಕಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಾಧ್ಯವಾಗಲ್ಲ. ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಚಾರ್ಜ್ ಶೀಟ್ ಸಲ್ಲಿಸಬೇಕು. ಚಾರ್ಜ್ ಶೀಟ್ ಸಲ್ಲಿಸಿದರೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಹುದು. ವಿದೇಶದಲ್ಲಿದ್ದಾಗ ಈ ವಾರಂಟ್ ಮೇಲೆ ಬಂಧಿಸುವಂತಿಲ್ಲ.ಭಾರತದ ಗಡಿ ಒಳಗೆ ಬಂದರೆ ಪ್ರಜ್ವಲ್ ರೇವಣ್ಣನನ್ನು ಬಂಧಿಸಬಹುದು ಎಂದು ವಿಶೇಷ ತನಿಖ ತಂಡದ ಹಿರಿಯ ಅಧಿಕಾರಿಗಳು ತಿಳಿಸಿದರು.
ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ 27ರಂದು ವಿದೇಶಕ್ಕೆ ಪರಾರಿಯಾಗಿದ್ದಾರೆ. ಈಗಾಗಲೇ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಜ್ವಲ್ ಎಲ್ಲಿದ್ದಾರೆ ಅವರ ಚಟುವಟಿಕೆಗಳೇನು ಪ್ರತಿಯೊಂದು ಚಲನವಲನಗಳನ್ನು ಇಂಟರ್ಫೋಲ್ ಮುಖಾಂತರ ಗಮನ ಹರಿಸಲಾಗುತ್ತಿದೆ. ಸದ್ಯ ಪ್ರಜ್ವಲ್ ಅವರು ಜರ್ಮನಿಯಿಂದ ಲಂಡನ್ ಗೆ ಪ್ರಯಾಣಿಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.