ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ಇದ್ದುಕೊಂಡೆ ಇದೀಗ ಮೊದಲ ಬಾರಿಗೆ ವಿಡಿಯೋ ಮೂಲಕ ಹೇಳಿಕೆಯನ್ನು ನೀಡಿದ್ದಾರೆ ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ವಿದೇಶಕ್ಕೆ ಹೋದ ಮೂರು ನಾಲ್ಕು ದಿನದ ಬಳಿಕ ಪ್ರಕರಣದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಆನಂತರ ಎಸ್ ಐಟಿ ನೋಟಿಸ್ ನೀಡಿದ ಬಗ್ಗೆ ಮಾಹಿತಿ ಸಿಕ್ಕಿತು.ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಿದೇಶದಿಂದ ವಿಡಿಯೋ ರಿಲೀಸ್ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.
ಹಾಗಾಗಿ ಮೇ 31ರಂದು ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇನೆ. ಅಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇನೆ ನನ್ನ ತಂದೆ ತಾಯಿ ಹಾಗೂ ತಾತನ, ಕುಮಾರಣ್ಣನ ಕ್ಷಮೆ ಕೋರುತ್ತೇನೆ ರಾಜ್ಯದ ಜನತೆ ಕಾರ್ಯಕರ್ತರ ಬಳಿಯು ಕ್ಷಮೆ ಕೋರುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ನ್ಯೂಸ್ ಚಾನೆಲ್ ನಲ್ಲಿ ನನ್ನ ಕುರಿತು ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದೆ. ಹಾಗಾಗಿ ನಮ್ಮ ವಕೀಲರ ಮೂಲಕ 7 ದಿನ ಸಮಯಾವಕಾಶ ಕೇಳಿದ್ದೆ. ಮಾರನೆಯ ದಿನ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಬಹಿರಂಗ ವೇದಿಕೆಗಳಲ್ಲಿ ಈ ಒಂದು ವಿಚಾರ ಪ್ರಚಾರ ಮಾಡೋದಕ್ಕೆ ಶುರು ಮಾಡಿದರು.
ಆಗ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಅದಾದ ನಂತರ ಹಾಸನದಲ್ಲಿ ಕೆಲವು ಶಕ್ತಿಗಳು ರಾಜಕೀಯ ಪಿತೂರಿ ಮಾಡಿದ್ದಾರೆ. ರಾಜಕೀಯವಾಗಿ ನಾನು ಹೇಗೆ ಬೆಳೆಯುತ್ತಿದ್ದೇನೆ ಎಂದು ನನ್ನನ್ನು ಉಗಿಸಲು ಎಲ್ಲಾ ರೀತಿಯಿಂದ ಅವರು ಪ್ರಯತ್ನ ಮಾಡಿದ್ದಾರೆ. ಈ ಒಂದು ಘಟನೆಯಿಂದ ನಾನು ಆಘಾತಕ್ಕೆ ಒಳಗಾಗಿದ್ದರಿಂದ ಸ್ವಲ್ಪ ನಾನು ದೂರವಿದ್ದೆ ಹಾಗಾಗಿ ನಾನು ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.